ಕುತ್ತಾರು, ಜು. 23: ಶೃತಿ ಲಯ ಕಲಾ ಕೇಂದ್ರ ಕುತ್ತಾರು ಮುಂದಾಳತ್ವದಲ್ಲಿ, ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯಲಿರುವ ನಾಲ್ಕನೇ ವರ್ಷದ “ಕುತ್ತಾರು ಮುದ್ದುಕೃಷ್ಣ” ಸ್ಪರ್ಧಾ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಶ್ರೀಕೃಷ್ಣ ಸಾಂಸ್ಕೃತಿಕ ಮಹೋತ್ಸವ ಸಮಿತಿಯನ್ನು ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ರವಿ ರೈ ಫಜೀರು ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಪ್ರಕಾಶ್ ಸಿಂಪೋನಿ, ಗೌರವ ಸಲಹೆಗಾರರಾಗಿ ನರೇಶ್ ಕುಮಾರ್ ಬಬ್ಬುಕಟ್ಟೆ, ನಿರ್ದೇಶಕರಾಗಿ ಭಾಸ್ಕರ್ ಕುತ್ತಾರ್, ಪ್ರಧಾನ ಕಾರ್ಯದರ್ಶಿಯಾಗಿ ತ್ಯಾಗಮ್ ಹರೇಕಳ, ಕೋಶಾಧಿಕಾರಿಯಾಗಿ ನವೀನ್ ಕುತ್ತಾರ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಭೋಜಾನಂದ ಬಾಳೆಪುಣಿ, ಶಿವಕುಮಾರ್ ಟಿ. ಹರೇಕಳ, ಶ್ರೀದೇವಿ ರೈ ಬರಿಕೆ, ಭಾರತಿ ಶೆಟ್ಟಿ ಬಿಕರ್ನಕಟ್ಟೆ, ಸದಾನಂದ ಬಾಳೆಪುಣಿ, ಚಂದ್ರಕಲಾ ಟೀಚರ್, ಪೂಜಾ ಶೆಟ್ಟಿ, ನಾಗವೇಣಿ ಶೆಟ್ಟಿ ಅಸೈಗೋಳಿ, ರಶ್ಮಿ, ಸೋನಿ ರೈ ಹಾಗೂ ಚಂದ್ರಕಲಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಯಾಗಿ ಅಭಿಷೇಕ್ ಬೇಕಲ್, ಸಂಘಟನಾ ಕಾರ್ಯದರ್ಶಿಯಾಗಿ ಅಮರನಾಥ್ ಬೇಕಲ್ ನೇಮಕಗೊಂಡರು.
ಸಂಚಾಲಕರಾಗಿ ರಾಜೇಶ್ ಆಚಾರ್ಯ, ದೇವಿಪ್ರಸಾದ್ ರೈ ಪೆಲತ್ತಾಡಿ ಹಾಗೂ ಆಕಾಂಕ್ಷ ಬಿ. ಶೆಟ್ಟಿ ಬಬ್ಬುಕಟ್ಟೆ ಆಯ್ಕೆಯಾದರು.
ವೇದಿಕೆ ಸಮಿತಿ ಸಂಚಾಲಕರಾಗಿ ರೋಶಲ್ ಪ್ರಕಾಶ್ ಹಾಗೂ ಸೌಮ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಅಂಜನಾ ಅಭಿಷೇಕ್ ಹಾಗೂ ಮೇಘಶ್ರೀ ರಾವ್ ಮಂಜೇಶ್ವರ, ಅತಿಥಿ ಸತ್ಕಾರ ಸಮಿತಿ ಸಂಚಾಲಕರಾಗಿ ಶುಭಲತಾ ಹಾಗೂ ವಿಜಯಲಕ್ಷ್ಮಿ, ನೋಂದಣಿ ಸಮಿತಿ ಸಂಚಾಲಕರಾಗಿ ರಶ್ಮಿ ಹಾಗೂ ವಿನುತ ಭಾಸ್ಕರ್, ಗ್ರೀನ್ ರೂಮ್ ಸಮಿತಿ ಸಂಚಾಲಕರಾಗಿ ಬಿಂದ್ಯಾ ಕುಲಾಲ್ ಹಾಗೂ ದೀಪಶ್ರೀ ಕೊಂಡಾಣ, ಸ್ಪರ್ಧಾ ಸಮಿತಿ ಸಂಚಾಲಕರಾಗಿ ಶರ್ಮಿತ ಅಸೈಗೋಳಿ, ಸುವರ್ಣ ಕೊಣಾಜೆ ಹಾಗೂ ಅರ್ಪಿತಾ, ಊಟ-ಉಪಹಾರ ಸಮಿತಿ ಸಂಚಾಲಕರಾಗಿ ಸುಜಿತ್ ಮಾಡೂರು ಹಾಗೂ ಸುನಿಲ್ ಮಾಡೂರು ಅವರನ್ನು ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿ ಸದಸ್ಯರಾಗಿ ನಯನ ಅಸೈಗೋಳಿ, ಗೀತಾ ಶೆಟ್ಟಿ ನಾರ್ಯಗುತ್ತು, ಅನುಶ್ರೀ ಬಾಳೆಪುಣಿ, ನಯನ, ಶೃಜನ್, ಸುಜಿತ್ ಬೀರಿ, ಅಕ್ಷರ ಆರ್. ಆಚಾರ್ಯ, ಕು. ಹರ್ಷಿತಾ ಆಚಾರ್ಯ, ತನ್ವಿ, ಅಶ್ವಿತಾ, ಸುನಿಲ್ ಮಾಡೂರು, ಶಮನ್ ಆಚಾರ್ಯ ದೇರಳಕಟ್ಟೆ, ಮಾಲವಿಕ, ಗೌತಮಿ ಉಳ್ಳಾಲ ಹಾಗೂ ಅಂಕಿತ ಸಂತೋಷ್ ನಗರ ಅವರನ್ನು ಆಯ್ಕೆ ಮಾಡಲಾಯಿತು.
ಸ್ಪರ್ಧಾ ಸಮಿತಿ ಸದಸ್ಯರಾಗಿ ರೇಖಾ, ಪ್ರೇಮಲತಾ ಟೀಚರ್, ಕುಸುಮ ಉಡುಪ, ಮಂಜುಳಾ ಮಂಜೇಶ್ವರ, ಕು. ಹಂಶಿಣಿ, ನಿಶಾ ಕರ್ಕೇರ, ನಿತೇಶ್, ರಮ್ಯ ಬೇಕಲ್, ಲತಾ, ಕೆ. ಸುನೀತಾ ಟೈಲರ್ ಮುಡಿಪು, ದೇವಿಕಾ ಶೆಟ್ಟಿ ಪಿಲಾರು ಹಾಗೂ ನಯನ ಬಬ್ಬುಕಟ್ಟೆ ಆಯ್ಕೆಯಾದರು.
ನೋಂದಣಿ ಸಮಿತಿ ಸದಸ್ಯರಾಗಿ ಕಾವ್ಯ ಶ್ರೀ, ರೇಖಾ ವಿಶ್ವನಾಥ್, ಕು. ವಂದಿತಾ ರಾವ್, ಸಾವಿತ್ರಿ ಪಂಡಿತ್ ಹೌಸ್, ಅಂಕಿತ, ದಿಷಿತ ಪ್ರಕಾಶ್ ನಗರ, ಗೌತಮಿ ಸಂತೋಷ್ ನಗರ ಹಾಗೂ ಪ್ರತ್ವಿಕ್ ಚೆಂಬುಗುಡ್ಡೆ ಅವರನ್ನು ಆಯ್ಕೆ ಮಾಡಲಾಯಿತು.
ಊಟ-ಉಪಹಾರ ಸಮಿತಿ ಸದಸ್ಯರಾಗಿ ಶರ್ಮಿಳಾ ಶೆಟ್ಟಿ ಪೆಲತ್ತಾಡಿ, ಪ್ರಾಂಜನ್ ಶೆಟ್ಟಿ, ಅಭಿಷೇಕ್ ಶೆಟ್ಟಿ ಕಂಬ್ಳಪದವು, ರಮ್ಯ ದೇರಳಕಟ್ಟೆ, ಶಮನ್ ಆಚಾರ್ಯ ದೇರಳಕಟ್ಟೆ, ಯಶಸ್ ರೈ, ಪದ್ಮಶ್ರೀ ಅಸೈಗೋಳಿ, ಸವಿತಾ ಅಸೈಗೋಳಿ, ತೃಷಾ ಅಸೈಗೋಳಿ .ಮಾನ್ಯ ಪ್ರಕಾಶ್ ನಗರ, ಭಾರತಿ ರೈ ಅಸೈಗೋಳಿ ಹಾಗೂ ಇಶಾನಿ ದೇರಳಕಟ್ಟೆ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಶೃತಿ ಲಯ ಮಹಿಳಾ ಕಲಾ ಕೇಂದ್ರದ ಅಧ್ಯಕ್ಷೆ ಶೋಭಾ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.