Site icon Ullalavani

ರೋಟರಿ ಸೇವೆ ಗಗನದೆತ್ತರಕ್ಕೆ ಹಾರಲಿ: ಡಾ. ಅರವಿಂದ ಭಟ್


ಮಂಗಳೂರು, ಜು.21: ಗಗನದೆತ್ತರಕ್ಕೆ ಹಾರುವ ಗಾಳಿಪಟದಂತೆ ರೋಟರಿಯ ಸೇವೆಯೂ ಅತ್ಯುನ್ನತ ಮಟ್ಟಕ್ಕೇರಬೇಕು. ಸಮಾಜದ ಪ್ರತಿಯೊಬ್ಬರ ಹೃದಯವನ್ನು ತಟ್ಟುವ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೋಟರಿ ತನ್ನ ಸಾಮಾಜಿಕ ಬದ್ಧತೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ರೊ. ಡಾ. ಅರವಿಂದ ಭಟ್ ಹೇಳಿದರು.


ನಗರದ ಈಡನ್ ಕ್ಲಬ್‌ನಲ್ಲಿ ಭಾನುವಾರ ನಡೆದ ರೋಟರಿ ಕ್ಲಬ್ ಮಂಗಳೂರು ಡೌನ್ ಟೌನ್‌ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.


ರೋಟರಿ ಕ್ಲಬ್ ಮಂಗಳೂರು ಡೌನ್ ಟೌನ್ ಜಿಲ್ಲೆಯಲ್ಲಿ ಅತ್ಯುತ್ತಮ “ಡೈಮಂಡ್ ಪ್ಲಸ್” ಪ್ರಶಸ್ತಿಯನ್ನು ಪಡೆದಿರುವುದು ಕ್ಲಬ್‌ನ ಉತ್ತಮ ಸೇವಾ ಚಟುವಟಿಕೆಗಳಿಗೆ ದೊರೆತ ಮಾನ್ಯತೆಯಾಗಿದೆ ಎಂದು ಅವರು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರೊ. ಎ. ಉಮೇಶ್ ಗಟ್ಟಿ, ಕಾರ್ಯದರ್ಶಿಯಾಗಿ ರೊ. ಪಿ.ವೈ. ಪವಿತ್ರ ಕುಮಾರ್ ಗುರುಕ್ಕಲ್, ಕೋಶಾಧಿಕಾರಿಯಾಗಿ ರೊ. ಸಂದೀಪ್ ಹಂದೆ, ಉಪಾಧ್ಯಕ್ಷರಾಗಿ ರೊ. ಜಯರಾಜ್ ಕೆ., ಜೊತೆ ಕಾರ್ಯದರ್ಶಿಯಾಗಿ ರೊ. ಪ್ರಶಾಂತ್ ನಾಯಕ್, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ರೊ. ಶಿವಪ್ರಸಾದ್, ನಿಕಟ ಪೂರ್ವ ಅಧ್ಯಕ್ಷರಾಗಿ ರೊ. ಸತ್ಯಜಿತ್ ರಾವ್ ಹಾಗೂ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ರೊ. ಸೂರಜ್ ಹೆಬ್ಬಾರ್ ಅಧಿಕಾರ ಸ್ವೀಕರಿಸಿದರು.


ನಿರ್ದೇಶಕರಾಗಿ ರೊ. ರಾಜೇಶ್ ಶೆಟ್ಟಿ, ರೊ. ಏಕನಾಥ ದಂಡಕೇರಿ, ರೊ. ಗಣೇಶ್ ಭಂಡಾರಿ, ರೊ. ನಾಗರಾಜ ಕಾಮತ್, ರೊ. ಗಣಪತಿ ಶೆಣೈ ಬೇಕಲ್, ರೊ. ಪ್ರಭಾತ್ ಜೋಶಿ, ರೊ. ಅನಿಲ್ ಬಾಳಿಗ ಹಾಗೂ ರೊ. ಡಾ. ಪವನ್ ಚಂದ್ ಅತ್ತಾವರ್ ಅಧಿಕಾರ ವಹಿಸಿಕೊಂಡರು. ವಿವಿಧ ಸಮಿತಿಗಳ ಅಧ್ಯಕ್ಷರಾಗಿ ರೊ. ಡಾ. ಸವಿತಾ ಗಟ್ಟಿ, ರೊ. ಜಯರಾಮ್ ಎಂ., ರೊ. ಗಿರೀಶ್ ಮಂಜೇಶ್ವರ್, ರೊ. ಸುಬಿರಾಜ್ ಶೆಟ್ಟಿ, ರೊ. ಆಶಾಲತಾ ದಂಡಕೇರಿ ಹಾಗೂ ರೊ. ಪರಿಣಿತಾ ಶೆಣೈ ಅಧಿಕಾರ ಸ್ವೀಕರಿಸಿದರು.


ಕ್ಲಬ್‌ನ ನೂತನ ಸದಸ್ಯರಾಗಿ ಸುರೇಶ್ ಎಂ.ಎಸ್., ನಾರಾಯಣ ಭಿಡೆ ಹಾಗೂ ಮಹೇಶ್ ಕುಮಾರ್ ಸೇರ್ಪಡೆಯಾದರೆ, ಡಾ. ರಾಘವೇಂದ್ರ ಹೊಳ್ಳ ಅವರನ್ನು ಗೌರವ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.
ರೋಟರಿ ಜಿಲ್ಲಾ 3181ರ ವಲಯ–3ರ ಅಸಿಸ್ಟೆಂಟ್ ಗವರ್ನರ್ ರೊ. ರಾಜೇಶ್ ಶೆಟ್ಟಿ ಅವರು ಕ್ಲಬ್‌ನ ಮಾಸಪತ್ರಿಕೆ “ರೋಟೊವಿಷನ್” ಅನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಜೋನಲ್ ಲೆಫ್ಟಿನೆಂಟ್ ರೊ. ರೂಪಾ ಶೆಟ್ಟಿ ಉಪಸ್ಥಿತರಿದ್ದರು.
ಸೇವಾ ಕಾರ್ಯಕ್ರಮದ ಅಂಗವಾಗಿ ಜೆಪ್ಪು ಕಾಶಿಯಾ ಹೈಸ್ಕೂಲ್ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ₹10,000, ಕನ್ಯಾನದ ಭಾರತ್ ಸೇವಾಶ್ರಮಕ್ಕೆ ₹10,000 ಹಾಗೂ ನೆರಿಯದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲೆಯ ಶಿಕ್ಷಕರ ಒಂದು ವರ್ಷದ ವೇತನಕ್ಕಾಗಿ ₹80,000 ನೆರವು ವಿತರಿಸಲಾಯಿತು.
ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿದ ಪಾಲ್ ಹ್ಯಾರಿಸ್ ಸೊಸೈಟಿ ಹಾಗೂ ಪೋಲಿಯೋ ಪ್ಲಸ್ ಸೊಸೈಟಿ ಸದಸ್ಯರಾದ ರೊ. ಸೂರಜ್ ಹೆಬ್ಬಾರ್ ಮತ್ತು ರೊ. ಏಕನಾಥ ದಂಡಕೇರಿ ಅವರನ್ನು ರೋಟರಿ ಜಿಲ್ಲಾ ಮಾಜಿ ಗವರ್ನರ್ ರೊ. ರಂಗನಾಥ ಭಟ್ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ರೊ. ಸತ್ಯಜಿತ್ ರಾವ್ ವಹಿಸಿ ಸ್ವಾಗತಿಸಿದರು. ರೊ. ನಾಗರಾಜ ಕಾಮತ್ ಹಾಗೂ ರೊ. ಸುಬಿರಾಜ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರೆ, ರೊ. ಪ್ರಶಾಂತ್ ನಾಯಕ್ ನೂತನ ಸದಸ್ಯರನ್ನು ಪರಿಚಯಿಸಿದರು.
ರೊ. ಆಶಾಲತಾ ದಂಡಕೇರಿ ಪ್ರಾರ್ಥಿಸಿದರು. ಕಾರ್ಯದರ್ಶಿ ರೊ. ಪಿ.ವೈ. ಪವಿತ್ರ ಕುಮಾರ್ ಗುರುಕ್ಕಲ್ ವಂದಿಸಿದರು. ರೊ. ಸರಿತಾ ಶೆಟ್ಟಿ ಹಾಗೂ ಕುಮಾರಿ ನೇಹಾ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version