ಕುತ್ತಾರು : ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇದರ 40 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ದೇವಸ್ಥಾನದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ನೆರವೇರಿಸಿದರು.
ಸೆ.13 ರಿಂದ ಸೆ.15 ರವರೆಗೆ ಜರಗಲಿರುವ ಉತ್ಸವದಲ್ಲಿ ಸಮಸ್ತ ಭಕ್ತಾಭಿಮಾನಿಗಳು ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಸನಿಲ್, ಕೋಶಾಧಿಕಾರಿ ಜಗನ್ನಾಥ್ ಸಾಲ್ಯಾನ್,ಗೌರವಾಧ್ಯಕ್ಷ ಚಂದ್ರಹಾಸ್ ಕೊಟ್ಟಾರಿ, ಪದ್ಮನಾಭ ಮರ್ಕೆದು, ರವಿ ಕುಕ್ಕುದಕಟ್ಟೆ, ಧನುಷ್ ಗಟ್ಟಿ, ಉದಯ ಬಾಕಿಮಾರ್, ವೇದ ಗಟ್ಟಿ ಮುಂತಾದವರು ಉಪಸ್ಥಿತರಿದ್ದರು.
