
ಕುತ್ತಾರು : ಸನಾತನ ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ಕುತ್ತಾರು ಬಾಲ ಸಂರಕ್ಷಣಾ ಕೇಂದ್ರ, ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವನಮಹೋತ್ಸವ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಚೌಟ ಕಕ್ಕೆಮಜಲು ಅವರು ಕೇಂದ್ರದ ಉದ್ಯಾನದಲ್ಲಿ ಗಿಡನೆಟ್ಟು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯವಾಗಿದ್ದು ಪರಿಸರ ರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಸುಂದರ ವಾತಾವರಣ ನಿರ್ಮಿಸಿಕೊಡೋಣ ಎಂದರು.
ಕೋಶಾಧಿಕಾರಿ ಸುನಿಲ್ ಮಾತನಾಡಿ ನೂತನ ಪ್ರತಿಷ್ಠಾನದ ಮೂಲಕ ಬಹಳಷ್ಟು ಸೇವೆಗಳನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಅನೇಕ ಸೇವಾ ಚಟುವಟಿಕೆ ನಡೆಸಲಿದ್ದೇವೆ. ಬಡವರಿಗೆ ಸಹಕಾರ, ತೊಂದರೆ ಇದ್ದವರಿಗೆ ಸಹಕಾರ, ನೊಂದAತಹ ಜೀವಗಳಿಗೆ ಸಾಂತ್ವನ, ತಲಾ ೧೦ಕೆ.ಜಿ. ಯಂತೆ ೨೦೦ಕುಟುಂಬಕ್ಕೆ ಎರಡು ಸಾವಿರ ಕೆ.ಜಿ. ಅಕ್ಕಿ ಅರ್ಹ ಫಲಾನುಭವಿಗಳಿಗೆ ಶ್ರೀಕ್ಷೇತ್ರ ಕುತ್ತಾರಿನಲ್ಲಿ ವಿತರಿಸಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗಟ್ಟಿ, ಕೋಶಾಧಿಕಾರಿ ಸುನಿಲ್, ಉಪಾಧ್ಯಕ್ಷ ಜಗದೀಶ್ ಸಾಲಿಯಾನ್, ಕಾರ್ಯದರ್ಶಿ ದಿನೇಶ್, ಜೊತೆ ಕಾರ್ಯದರ್ಶಿ ರಾಮಚಂದ್ರ ಶೆಟ್ಟಿ, ಲತೀಶ್ ರೈ, ಜೆ.ಪಿ. ರೈ, ರಾಮಣ್ಣ ಶೆಟ್ಟಿ ಕಕ್ಕೆಮಜಲು, ರಮೇಶ್ ರೈ ಕೊಣಾಜೆ, ಸುರೇಶ್ ಅಂಬ್ಲಮೊಗರು, ಸಂಚಾಲಕರುಗಳಾದ ಪವಿತ್ರ ಕುಮಾರ್ ಗಟ್ಟಿ, ಕೃಷ್ಣ ಶೆಟ್ಟಿ ತಾಮಾರ್, ರಮೇಶ್ ಕೊಲ್ಯ, ಪ್ರದೀಪ್ ಶೆಟ್ಟಿ ಅಡ್ಕಗುತ್ತು, ಬಾಬು ಶೆಟ್ಟಿ ಕೊಂಡಾಣಗುತ್ತು, ವಸಂತ ಅಡಪ್ಪ, ವೇದಾ ಪಿ. ಗಟ್ಟಿ ಹಾಗೂ ಮಹಿಳಾ ಸಮಿತಿ ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
