Site icon Ullalavani

ಜು.19ರಂದು ಸಂಬಾರತೋಟ ಕುಟುಂಬದ ‘ಫ್ಯಾಮಿಲಿ ಸ್ಪೋರ್ಟ್ಸ್ ಡೇ – 2026’

ಮಂಗಳೂರು, ಜು.18: ಸಂಬಾರತೋಟ ಕುಟುಂಬದ ಸದಸ್ಯರ ಸೌಹಾರ್ದತೆ, ಒಗ್ಗಟ್ಟು ಹಾಗೂ ಕುಟುಂಬ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ‘ಸಂಬಾರತೋಟ ಫ್ಯಾಮಿಲಿ ಸ್ಪೋರ್ಟ್ಸ್ ಡೇ – 2026’ ಕಾರ್ಯಕ್ರಮವು ಜುಲೈ 19ರಂದು (ಭಾನುವಾರ) ಇನೋಳಿ ಲಾಲ್‌ಪತ್ತಾರ್ ರೆಸಾರ್ಟ್‌ನಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ನಡೆಯಲಿದೆ.

ಕುಟುಂಬದ ಹಿರಿಯರಾದ ಅಹ್ಮದ್ ಅಜ್ಜ ಹಾಗೂ ಬೀಚಿಮ್ಮ ಅಜ್ಜಿ ಅವರ ಕುಟುಂಬದ ವತಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಗಲಿದ ಹಿರಿಯರಾದ ಅರಬಿ ಅಜ್ಜ, ಮೊಯ್ದೀನ್ ಅಜ್ಜ, ಔರಾನ್ ಅಜ್ಜ, ಇಸ್ಮಾಯಿಲ್ ಅಜ್ಜ, ಹಸೈನ್ ಅಜ್ಜ, ಮೂಸಾ ಅಜ್ಜ, ಇಬ್ರಾಹಿಂ ಅಜ್ಜ, ಖತೀಜುಮ್ಮ, ಉಮ್ಮನ್ಹಿಯುಮ್ಮ ಹಾಗೂ ಬೀಫಾತುಮ್ಮ ಅವರ ನೆನಪಿಗೂ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುವುದು.

ಕಾರ್ಯಕ್ರಮದಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು, ಮನರಂಜನಾ ಆಟಗಳು, ಮಕ್ಕಳಿಗಾಗಿ ವಿಶೇಷ ಸ್ಪರ್ಧೆಗಳು ಹಾಗೂ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು.

ಇದರೊಂದಿಗೆ ಕುಟುಂಬ ಸದಸ್ಯರ ಪರಸ್ಪರ ಪರಿಚಯ, ಹಳೆಯ ನೆನಪುಗಳ ಹಂಚಿಕೆ ಹಾಗೂ ಕುಟುಂಬದ ಒಗ್ಗಟ್ಟಿನ ಸಂದೇಶ ಸಾರುವ ವಿಶೇಷ ಕಾರ್ಯಕ್ರಮಗಳೂ ನಡೆಯಲಿವೆ.

ಸಂಬಾರತೋಟ ಕುಟುಂಬದ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Exit mobile version