Site icon Ullalavani

ಸಂತ ಅಲೋಶಿಯಸ್ ಉರ್ವಾದಲ್ಲಿ ಮೌಲ್ಯಶಿಕ್ಷಣ ಕಾರ್ಯಾಗಾರ

ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾದಲ್ಲಿ ಒಂದು ದಿನದ ಮೌಲ್ಯಶಿಕ್ಷಣ ತರಬೇತಿ ಕಾರ್ಯಾಗಾರವು ರಜತ್ ಶೈಲೇಶ್ ಲೋಬೊ ನೇತೃತ್ವದಲ್ಲಿ ಒಟ್ಟು 12 ಮಂದಿಯ ತಂಡದಿಂದ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರವು ನಡೆಯಿತು.


ದೀಪ ಬೆಳಗಿಸುವುದರೊಂದಿಗೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕರು ಮತ್ತು ಉರ್ವ ಇಮ್ಯಾನಿಕ್ ಚರ್ಚ್ ಧರ್ಮ ಗುರುಗಳಾದ ವಂ ಗುರು ಬೆಂಜಮೀನ್ ಪಿಂಟೊರವರು ನೆರವೇರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಉತ್ತಮ ನೈತಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿ ಹಾಗೂ ಈ ಕಾರ್ಯಗಾರದ ಸದುಪಯೋಗವನ್ನು ಪಡೆದು ಉತ್ತಮ ಮೌಲ್ಯಗಳನ್ನು ಅಳವಡಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಾರ್ಯಗಾರ ನಡೆಸಿಕೊಡಲು ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಅಲೋಶಿಯಸ್ ಡಿಸೋಜರವರು ಸ್ವಾಗತಿಸಿ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಂಡು ಮೌಲ್ಯಯುತ ಜೀವನ ನಡೆಸೋಣ ಎಂಬುದಾಗಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಜತ್ ಶೈಲೇಶ್ ಲೋಬೊ , ಶಾಲೆಯ ಹಿರಿಯ ಶಿಕ್ಷಕಿ ಲವೀನಾ ಡಿಕುನ್ಹಾ, ಶಾಲಾ ನಾಯಕ ಹರ್ಷವರ್ಧನ್, ಶಾಲಾ ಉಪನಾಯಕಿ ಜೈನ್ ಜೆರುಶಾ ಪಿಂಟೊ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕಿ ಲವೀನಾ ಪಿಂಟೋ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version