Site icon Ullalavani

ಉಚ್ಚಿಲ: ಲೈಫ್ ಲೈನ್ ಫೌಂಡೇಶನ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಸೋಮೇಶ್ವರ: ಲೈಫ್ ಲೈನ್ ಫೌಂಡೇಶನ್ ಉಚ್ಚಿಲ ವತಿಯಿಂದ ಸಾಧಕ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಪೂರ್ಣವಾಗಿ ಸನ್ಮಾನಿಸಲಾಯಿತು.

ಮಜಲ್ ರೆಸಿಡೆನ್ಸಿಯಲ್ಲಿ ನಡೆದ ಸಮಾರಂಭವನ್ನು ಕೆ.ಎಸ್.ಶೇಖ್ ಕರ್ನಿರೆ (Expertise Group COO ಸೌದಿ ಅರೇಬಿಯಾ) ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಲಹೆ, ಮಾರ್ಗದರ್ಶನ ನೀಡಿದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಮುಖ್ಯ ಅಥಿತಿಯಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿರ್ವತ್ತ ಪ್ರಿನ್ಸಿಪಾಲ್ ಡಾ. ಉದಯ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು.

ಮುಹಮ್ಮದ್‌ ಅನಸ್ ಅವರ ಕುರ್‌ಆನ್ ಪಠಣದೊಂದಿಗೆ ಆರಂಭವಾದ ಸಮಾರಂಭದಲ್ಲಿ‌ ಫೌಂಡೇಶನ್ ಅಧ್ಯಕ್ಷ ಅಬ್ಬಾಸ್ ಪಿ. ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು.
ಮುಹಮ್ಮದ್ ಅಲಿ ಉಚ್ಚಿಲ್ ಪ್ರಾಸ್ತಾವಿಕ ಭಾಷಣ ಮಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಇಲ್ಯಾಸ್ ಉಚ್ಚಿಲ್ ಸಭಾ ಕಾರ್ಯಕ್ರಮ ನಡೆಸಿಕೊಟ್ಟರು.

ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಫೌಂಡೇಶನ್ ಜನರಲ್ ಸೆಕ್ರೆಟರಿ ಹಮೀದ್ ಉಚ್ಚಿಲ್ ಮತ್ತು ಗೌರವಾಧ್ಯಕ್ಷ ಅಬ್ದುಲ್ ಮಜೀದ್ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫೌಂಡೇಶನ್ ಪದಾಧಿಕಾರಿಗಳಾದ ಅಬ್ಬಾಸ್ ಮಜಲ್, ಅಬ್ದುಲ್ ರಝಾಕ್ ಎಂ.ಆರ್., ಅಬ್ದುಲ್ ಹಮೀದ್, ನಾಸಿರ್ ಖಾನ್, ಮಹಮ್ಮದ್ U.P., ಮಹಮ್ಮದ್ ಅಲಿ G.I., ಕುಂಞಿ ಅಹ್ಮದ್, ಹುಸೈನ್, ಉಮರ್ ಪೇರಿಬೈಲ್, ಅಬ್ದುಲ್ ಲತೀಫ್ ಮತ್ತು ಅಹ್ಮದ್ ಬಾವ ಅವರು ಕಾರ್ಯಕ್ರಮ ಸಂಘಟಿಸಿದ್ದರು. ಅಬ್ದುಲ್ ಸಲಾಂ ವಂದಿಸಿದರು.

Exit mobile version