ಮಂಗಳೂರು: ಸ್ಕೂಟರ್‌ನಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡುತ್ತಿದ್ದ ಯುವಕನಿಗೆ ಮಂಗಳೂರು ನಗರ ಸಂಚಾರ ಠಾಣೆಯ ಪೊಲೀಸರು 7000 ರೂ. ದಂಡ ವಿಧಿಸಿದ್ದಾರೆ.
ಕೊಣಾಜೆ ಬಳಿ ವಿದ್ಯಾರ್ಥಿಯೋರ್ವ ಕಳೆದ ಮಾರ್ಚ್ ನಲ್ಲಿ ಸ್ಕೂಟರ್ ಸ್ಟಂಟ್ ಮಾಡಿದ್ದ. ಇದರ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಡ ವಿಧಿಸಿದ್ದಾರಲ್ಲದೆ ಚಾಲನಾ ಪರವಾನಿಗೆ ರದ್ದತಿಗೆ ಸಾರಿಗೆ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.