Site icon Ullalavani

ಬೆಳ್ಮ ಅಣ್ಣಿಬೆಟ್ಟುವಿನಲ್ಲಿ 6ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ಮ: ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬೆಳ್ಮ ಅಣ್ಣಿಬೆಟ್ಟುವಿನಲ್ಲಿ ಸೆಪ್ಟೆಂಬರ್ 4ರಂದು ನಡೆಯಲಿರುವ 6ನೇ ವರ್ಷದ ಮೊಸರು ಕುಡಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 30ರಂದು ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ವಿಶೇಷ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಅರಸು ಪೈಂದೊಷ್ಣಯ ಪೊಸಭೂತ ಬಂಟ ದೈವಗಳ ಆಡಳಿತ ಮೊಕ್ತೇಸರರಾದ ಅಶೋಕ್ ರೈ ಬರಿಕೆ, ಸೋಮನಾಥ ಫ್ರೆಂಡ್ಸ್ ಬೆಳ್ಮ ಅಣ್ಣಿಬೆಟ್ಟು ಅಧ್ಯಕ್ಷರಾದ ಡಾ. ಬಿ. ಎಸ್. ವೇಣುಗೋಪಾಲ್, ಸಂಘದ ಸದಸ್ಯರಾದ ಉದಯ್ ಪೂಜಾರಿ, ಯೋಗಿಶ್ ಆಚಾರ್ಯ, ಪ್ರವೀಣ್, ಭವಿಷ್, ನೈತಿಕ್, ಪ್ರಜ್ವಲ್, ಸಂಭ್ರಮ್, ಮನ್ವಿತ್, ಆಯುಷ್ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version