Site icon Ullalavani

ಅ.19 ರಿಂದ ಅ. 24ರವರೆಗೆ ಕೊಲ್ಯದಲ್ಲಿ 34ನೇ ವರ್ಷದ ಶ್ರೀ ಶಾರದಾ ಮಹೋತ್ಸವ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಲ್ಯ: ಸೋಮೇಶ್ವರ ಗ್ರಾಮದ ಕೊಲ್ಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುವ 34ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ.19 ರಿಂದ ಅ. 24ರವರೆಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕೊಲ್ಯ ಶ್ರೀ ಶಾರದಾ ಸಭಾ ಸದಸನದಲ್ಲಿ ನಡೆಯಲಿದೆ ಎಂದು ಸಮಿತಿ ಕೊಶಾ„ಕಾರಿ ಪ್ರಕಾಶ್ ಎಚ್. ತಿಳಿಸಿದರು.

ಕೊಲ್ಯ ಶ್ರೀ ಶಾರದಾ ಸಭಾ ಸದಸನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅ. 19ರಂದು ಬೆಳಗ್ಗೆ 7ಕ್ಕೆ ಸೋಮೇಶ್ವರ ಶ್ರೀ ಮದ್ವೇಶ ಭಟ್ ನೇತೃತ್ವದಲ್ಲಿ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದ್ದು, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೊಲ್ಯ ಶ್ರೀ ನಾಗಬ್ರಹ್ಮಸ್ಥಾನ ಧರ್ಮದರ್ಶಿ ಭಾಸ್ಕರ ಐತಾಳ್ ಚಾಲನೆ ನೀಡಲಿದ್ದು, ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.

ಅ.19ರಿಂದ 24ರವರೆಗೆ ಪ್ರತಿ ದಿನ ಬೆಳಗ್ಗೆ ಶ್ರೀ ಶಾರದಾ ಮಹಿಳಾ ಮಂಡಳಿಯಿಂದ ಲಲಿತಾ ಸಹಸ್ರನಾಮ ಪಠಣ, ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಅ.21ರಂದು ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಾಂಸ್ಕøತಿಕ ಸ್ಪರ್ಧೆ ನಡೆಯಲಿದೆ. ಅ. 23ರಂದು ಸಮಾರೋಪ ಕಾರ್ಯಕ್ರಮದಲ್ಲಿ ಉದ್ಯಮಿ ಗುರುಮೆ ಸುರೇಶ್ ಶೆಟ್ಟಿ, ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಚಿತ್ರನಟ ವಿನೋದ್ ಆಳ್ವ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಅ. 24ರಂದು ರಾತ್ರಿ 8ರ ಮಹಾಪೂಜೆಯ ಬಳಿಕ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆ ಕೊಲ್ಯದಿಂದ ಹೊರಟು ಸಫಮೇಶ್ವರ ಸೋಮನಾಥ ದೇವಸ್ಥಾನದ ಬಳಿಯ ಜಲಸ್ತಂಭನಗೊಳಿಸಲಾಗುವುದು ಎಂದರು.

ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಸಮಾಜದ ವಿವಿಧ ರಂಗಗಳ ಸಾಧಕರಿಗೆ ಸನ್ಮಾನ, ಅಭಿನಂದನೆ, ಪ್ರತಿಭಾ ಪುರಸ್ಕಾರ ನಡೆಯಲಿದ್ದು, ಇದರೊಂದಿಗೆ ರಾಷ್ಟ್ರೀಯ ದಿನಾಚರಣೆ, ಶಾಲಾ ಮಕ್ಕಳಿಗೆ ಪುಸ್ತಕ, ಕೊಡೆ ವಿತರಣೆ, ಸಾಂಸ್ಕøತಿಕ ಸ್ಪರ್ಧೆ, ಶ್ರಮದಾನ, ಆರೋಗ್ಯ ಶಿಬಿರ, ಹುಚ್ಚುನಾಯಿ ನಿಯಂತ್ರಣ ಲಸಿಕಾ ಶಿಬಿರ, ಅಶಕ್ತರಿಗೆ ಆರ್ಥಿಕ ಸಹಾಯ, ಶವಸಂಸ್ಕಾರ ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯ ಚಟುವಟಿಕೆಗಳನ್ನು ಸಮಿತಿ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಬಂಗೇರ. ಅಧ್ಯಕ್ಷ ಪ್ರವೀಣ ಕುಜುಮಗದ್ದೆ, ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಕುಜುಮಗದ್ದೆ, ಮುಖ್ಯ ಕಾರ್ಯ ನಿರ್ವಾಹಕಾರದ ವಿಶ್ವನಾಥ ಕೊಲ್ಯ, ಉಪಾಧ್ಯಕ್ಷ ಯಶೋಧರ, ಗೌರವ ಸಲಹೆಗಾರರಾದ ರಾಮಚಂದ್ರ ಕುಂಪಲ, ಮೋಹನ್ ಶೆಟ್ಟಿ ಕುಂಪಲ, ಜೊತೆ ಕಾರ್ಯದರ್ಶಿ ಜಗಜೀವನ್ ಕೊಲ್ಯ ಉಪಸ್ಥಿತರಿದ್ದರು.

Exit mobile version