Site icon Ullalavani

ತಲಪಾಡಿಯಲ್ಲಿ ಉಲಾಯಿ ಪಿದಾಯಿ ಆಟ: 9 ಮಂದಿ ಉಲಾಯಿ

ಉಳ್ಳಾಲ ;ತಲಪಾಡಿ ದೇವಿನಗರ ಶಾಲೆ ಬಳಿ ಉಲಾಯಿ ಪಿದಾಯಿ ಆಡುತ್ತಿದ್ದ ಒಂಭತ್ತು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ, ಆಟಕ್ಕಾಗಿ ಉಪಯೋಗಿಸುವ ಸ್ವತ್ತು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಿವೃತ್ತ ಸರಕಾರಿ ಉದ್ಯೋಗಿ ತಲಪಾಡಿ ದೇವಿಪುರದ ನಾರಾಯಣ (63), ಅದೇ ಊರಿನವರಾದ ರವಿ(47), ರತೀಶ್(39), ನಾಗೇಶ್(37), ಸತೀಶ್(46), ಮನೋಜ್ ಕುಮಾರ್ (53), ಭರತ್ ರಾಜ್ ಟಿ. (37), ಗಣೇಶ್ ಕುಮಾರ್, ಭರತ್ ರಾಜ್(37), ಧನರಾಜ್ (37), ಗಣೇಶ್ ಕುಮಾರ್ ಬಂಧಿತರಾಗಿದ್ದಾರೆ. ಆರೋಪಿತರಿಂದ ಮೊಬೈಲ್, ಆಟಕ್ಕೆ ಬಳಸಲಾದ ಸ್ವತ್ತು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version