ಬಂಟ್ವಾಳ: ಗ್ರಾಮಾತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಂಗೀಪೇಟೆ ಎಂಬಲ್ಲಿ ಮೆಂಜಿಸ್ ಪ್ಲಾಜ ಕಾಂಪ್ಲೆಕ್ಷ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆನರಾ ಬ್ಯಾಂಕಿನ ಪರಂಗೀಪೇಟೆ ಬ್ರಾಂಚ್ ನಲ್ಲಿ ಜು.12 ರಂದು ರಾತ್ರಿ ವೇಳೆ ಯಾರೋ ಕಳ್ಳರು ಕಳ್ಳತನಕ್ಕೆ ಯತ್ನಿಸಿರುತ್ತಾರೆ.
ಇಂದು ಬೆಳಿಗ್ಗೆ ಬ್ಯಾಂಕಿನ ಸಿಬ್ಬಂದಿಗಳು ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದ್ದು, ಬ್ಯಾಂಕಿನ ಮೇಲ್ಛಾವಣಿಯನ್ನು ತುಂಡರಿಸಿ ಕಳ್ಳರು ಬ್ಯಾಂಕ್ ಒಳಗೆ ಪ್ರವೇಶಿಸಿರುವುದಾಗಿದೆ. ಪ್ರಸ್ತುತ ಸ್ಥಳಕ್ಕೆ ಬಂಟ್ವಾಳ ಗ್ರಾಮಾತರ ಪೊಲೀಸ್ ಠಾಣಾ ಪೊಲೀಸರು, ಬೆರಳಚ್ಚುತಂಡ, ಸೋಕೋ ತಂಡ ಗಳು ಭೇಟಿ ನೀಡಿದ್ದು, ಯಾವುದೇ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುತ್ತದೆ. ಪರಿಶೀಲನೆಯ ಬಳಿಕ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಯುತ್ತಿದೆ.