Site icon Ullalavani

SIR ಸಮೀಕ್ಷೆ ವೇಳೆ ದಾಖಲೆ ಹುಡುಕಾಟದ ನಡುವೆ ಹೃದಯಾಘಾತ; ವ್ಯಕ್ತಿ ಸಾವು

ಉಳ್ಳಾಲ: SIR ಸಮೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಹುಡುಕುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಮಾಡೂರು ಶಾಲೆಯಲ್ಲಿ ಭಾನುವಾರ ಸಂಭವಿಸಿದೆ.

ಮೃತರನ್ನು ಕೊಲ್ಯ ನಿವಾಸಿ ಹರೀಶ್ ಗಟ್ಟಿ ಎಂದು ಗುರುತಿಸಲಾಗಿದೆ.SIR ಸಮೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಮಾಡೂರು ಶಾಲೆಯಲ್ಲಿ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಹುಡುಕುತ್ತಿದ್ದ ಸಂದರ್ಭ ಹರೀಶ್ ಗಟ್ಟಿ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ನೆರವು ನೀಡಲು ಪ್ರಯತ್ನಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಕೌನ್ಸಿಲರ್ ಸುಜಿತ್ ಮಾಡೂರು, ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Exit mobile version