Site icon Ullalavani

ಪಾಣಕ್ಕಾಡ್ ನಾಸರ್ ಅಲಿ ಮಂಗಳೂರು ಖಾಝಿ ತ್ವಾಖಾ ಉಸ್ತಾದ್‌ ಉತ್ತರಾಧಿಕಾರಿ; ಜು.11ರ ಸಭೆ ಬಳಿಕ ಘೋಷಣೆ

ಮಂಗಳೂರು ಮಂಗಳೂರು ಖಾಝಿಯಾಗಿ ಕೇರಳದ ಧಾರ್ಮಿಕ ವಿದ್ವಾಂಸ ಪಾಣಕ್ಕಾಡ್ ಸಯ್ಯದ್ ನಾಸ‌ರ್ ಅಲಿ ಶಿಹಾಬ್ ತಂಜಳ್‌ ಅವರ ಹೆಸರು ಕೇಳಿ ಬಂದಿದ್ದು, ಜು.11ರಂದು ಸಂಜೆ ಸಭೆಯ ಬಳಿಕ ಅಧಿ ಕೃತ ಘೋಷಣೆ ಹಾಗೂ ಪದಗ್ರಹಣದ ಸಿದ್ಧತೆ ನಡೆಯಲಿದೆ.

ಇತ್ತೀಚೆಗೆ ನಿಧನರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಉತ್ತರಾಧಿಕಾರಿಯಾಗಿ ಪಾಣಕ್ಕಾಡ್ ಸಯ್ಯದ್ ನಾಸರ್ ಅಲಿ ಅವರ ಹೆಸರನ್ನು ಝೀನತ್ ಬಕ್ಷ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಂತಿಮಗೊಳಿಸಿದೆ. ಪಾಣಕ್ಕಾಡ್ ಸಯ್ಯದ್ ನಾಸಿರ್ ಅಲಿ ಶಿಹಾಬ್ ತಂಜಳ್ ಕೇರಳದ ಅತ್ಯಂತ ಪ್ರಭಾವಿ ಮತ್ತು ಗೌರವಾನ್ವಿತ ಇಸ್ಲಾಮಿ ವಿದ್ವಾಂಸರಾಗಿದ್ದು, ಧಾರ್ಮಿಕ ಮತ್ತು ರಾಜಕೀಯ ನಾಯಕರಿರುವ ಪಾಣಕ್ಕಾಡ್ ಕುಟುಂಬದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕಲ್ಲಿಕೋಟೆ ಮುಖ್ಯ ಖಾಝಿಯಾಗಿ ಒಂದೂವರೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಪಾಣಕ್ಕಾಡ್ ತಂಬಳ್ ಕುಟುಂಬವು ಕೇರಳದ ಮುಸ್ಲಿಂ ಸಮುದಾಯದಲ್ಲಿ ಅತ್ಯುನ್ನತ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕತ್ವ ಹೊಂದಿದೆ. ಈ ಕುಟುಂಬದವರು ಪ್ರವಾದಿ ಮುಹಮ್ಮದ್ ಅವರ ವಂಶಸ್ಥರು ಎನ್ನಲಾಗಿದ್ದು, 18ನೇ ಶತಮಾನದಲ್ಲಿ ಯೆಮನ್‌ನಿಂದ ಕೇರಳಕ್ಕೆ ಬಂದರೆಂದು ಹೇಳಲಾಗುತ್ತಿದೆ. ವಲಸೆ ಶಿಹಾಬ್ ತಂಬಳ್ ಸುನ್ನಿ ಪಾಣಕ್ಕಾಡ್ ಕುಟುಂಬದ ಸದಸ್ಯರು ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಕೇರಳ ರಾಜ್ಯಾಧ್ಯಕ್ಷರಾಗಿ ಮತ್ತು ಕೇರಳದ ಪ್ರಮುಖ ಮುಸ್ಲಿಂ ಸಂಘಟನೆಗಳ ನೇತೃತ್ವ ವಹಿಸಿಕೊಂಡು ಬರುತ್ತಿದ್ದಾರೆ. ಸಯ್ಯದ್ ಸಾದಿಖಲಿ ಶಿಹಾಬ್ ತಂಜಳ್ ಪಕ್ಷದ ರಾಜಕೀಯ ಸಲಹಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರ ಹಿರಿಯ ಸಹೋದರ ದಿವಂಗತ ಸಯ್ಯದ್ ಮುಹಮ್ಮದಲಿ ಶಿಹಾಬ್ ತಂಜಳ್ ದೀರ್ಘ ಕಾಲದವರೆಗೆ ಸಮುದಾಯದ ಅತ್ಯಂತ ಪ್ರಭಾವಿ ನಾಯಕರಾಗಿದ್ದರು.

తంజాళా ಹಲವಾರು ಕುಟುಂಬದ ನಿವಾಸವು ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್‌ನಲ್ಲಿರುವ ಕೊಡಪ್ಪನಕಲ್ ಹೌಸ್‌ನಲ್ಲಿದ್ದು, ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಬರುವ ಜನರಿಗೆ ಸಾಂಪ್ರದಾಯಿಕ ಆಶ್ರಯ ತಾಣವಾಗಿದೆ. ಜಾತ್ಯತೀತ ಮೌಲ್ಯಗಳು ಮತ್ತು ಕೋಮು ಸೌಹಾರ್ದತೆಗೆ ಈ ಕುಟುಂಬ ಹೆಸರುವಾಸಿಯಾಗಿದೆ.

Exit mobile version