Site icon Ullalavani

ಮದರಸ ಅಧ್ಯಾಪಕರ ಮೇಲೆ ಅಮಾನವೀಯ ಹಲ್ಲೆ; ಸಿರಾಜ್ ಅಡ್ಕರೆ ಖಂಡನೆ

ಕೃಷ್ಣಾಪುರದ ತ್ವಯಿಬಾ ಜುಮಾ ಮಸೀದಿಯಲ್ಲಿ ಅಧೀನದಲ್ಲಿ‌ ಕಾರ್ಯನಿರ್ವಹಿಸುತ್ತಿರುವ ಮದರಸದ ಅಧ್ಯಾಪಕರೋರ್ವರಿಗೆ ಅವರು ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಸೀದಿಗೆ ನುಗ್ಗಿ ಹಲ್ಲೆಗೈದ ಘಟನೆಯು ಇಡೀ ಮುಸ್ಲಿಂ ಸಮುದಾಯದ ಮೇಲಿನ‌ ದಾಳಿಯಾಗಿದೆ.

ವಿದ್ಯಾರ್ಥಿಯೊಬ್ಬನಿಗೆ ದಂಡಿಸಿದರೆಂಬ ಕಾರಣವನ್ನಿಟ್ಟು ನೇರವಾಗಿ ಅಧ್ಯಾಪಕರ ಮೇಲೆ ದಾಳಿ ನಡೆಸಿರುವುದು ಅಕ್ಷಮ್ಯ ಮತ್ತು ಖಂಡನೀಯ , ಜಮಾಅತ್ ಕಮಿಟಿ ಕೂಡಲೇ ಆ ವ್ಯಕ್ತಿಯನ್ನು ಜಮಾಅತ್ ನಿಂದ ಬಹಿಷ್ಕಸಬೇಕು ಮತ್ತು ಪೋಲೀಸ್ ಇಲಾಖೆ ಹಲ್ಲೆಗೈದಾತನನ ಮೇಲೆ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷರಾದ ಎಂ ಸಿರಾಜ್ ಅಡ್ಕರೆ ಆಗ್ರಹಿಸಿದರು.

Exit mobile version