ಉಳ್ಳಾಲ: ಶರವು ನಿವಾಸಿ, ದಿವಂಗತ ಜನಾರ್ದನ ಗಟ್ಟಿ ಹಾಗೂ ದಿವಂಗತ ಗಿರಿಜಾ ಗಟ್ಟಿ ದಂಪತಿಯ ಪುತ್ರ ಹಾಗೂ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ವೇತ ಗಟ್ಟಿ ಅವರ ಪತಿ ಕಿಶೋರ್ ಗಟ್ಟಿ (50) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು.
ಕಿಶೋರ್ ಗಟ್ಟಿ ಅವರು ಏನೆಪೋಯ ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು, ಸೋಮೇಶ್ವರ ವಲಯ-1 ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ರಾಜಕೀಯ ಕ್ಷೇತ್ರದ ಜೊತೆಗೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಸೇವೆ ಮಾಡುತ್ತಿದ್ದರು.
ಮೃತರು ಪತ್ನಿ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಅಪಾರ ಬಂಧು-ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.
ಅವರ ಅಂತಿಮ ವಿಧಿ ವಿಧಾನಗಳು ಬುಧವಾರ ಬೆಳಿಗ್ಗೆ ಕುತ್ತಾರು ಮುಂಡೋಳಿ ಮನೆಯಿಂದ ನೆರವೇರಲಿವೆ.