ಉಳ್ಳಾಲ: ಅಸೈಗೋಳಿ ಮೈದಾನ ಶೀಘ್ರ ಮಿನಿ ಸ್ಟೇಡಿಯಂ ಆಗಿ ರೂಪಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಮೈಗೊಳ್ಳಲಾಗುವುದು, ದೇಶ ಕಟ್ಟಲು ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಕೊಣಾಜೆ ವಿವಿದೋದ್ಧೇಶ ಸಹಕಾರಿ ಸಂಘದಿಂದ ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕೊಣಾಜೆ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು ಅಧ್ಯಕ್ಷತೆ ವಹಿಸಿ, ‘ಮೂರ್ನಾಲ್ಕು ಗ್ರಾಮಗಳಿಗೆ ಆಟಕ್ಕಾಗಿ ಅಸೈಗೋಳಿ ಮೈದಾನ ಮಾತ್ರ ಇದ್ದು ಇದನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿಸುವ ಅವಶ್ಯಕತೆ ಇದೆ. 50 ವರ್ಷಗಳ ಹಿಂದೆ ಸರ್ವಧರ್ಮೀಯರು ಸೇರಿ ಸ್ಥಾಪಿಸಿದ ಸಹಕಾರು ಸಂಘದ ಅಭಿವೃದ್ಧಿಗೂ ಸಚಿವರ ಸಹಕಾರ ಬೇಕಿದೆ ಎಂದರು
ಅಭಿನಂದನಾ ಮಾತುಗಳನ್ನಾಡಿದ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಅನುದಾನ ಹಂಚಿಕೆ, ಇತರ ಕೆಲಸಗಳ ವಿಚಾರದಲ್ಲಿ ಪಕ್ಷ, ಧರ್ಮ. ಭೇದ ನೋಡದೆ ಕೆಲಸ ಮಾಡುವ ಮೂಲಕ ರಾಜ್ಯದ ಜನಮನ ಗೆದ್ದ ಅಪರೂಪದ ರಾಜಕಾರಣಿ ಯು.ಟಿ.ಖಾದರ್. ಯಾರ ಬಗ್ಗೆ ಅಭಿನಂದನಾ ಭಾಷಣ ಮಾಡುತ್ತಾರೋ ಅವರ ಗೌರವವೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಪುಲ್ಲು, ಪಜೀರ್ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ನಝೀರ್ ಮೊಯಿದ್ದೀನ್, ಗಡಿಪ್ರಧಾನರಾದ ದಿವಾಕರ ಭಂಡಾರಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಗತಿಪರ ಕೃಷಿಕರಾದ ರಮಾನಾಥ ಶೆಟ್ಟಿ, ನಾರಾಯಣ ರೈ ಕಕ್ಕೆಮಜಲು, ಸಂಘದ ಉಪಾಧ್ಯಕ್ಷ ಕರುಣಾಕರ
ಮೊದಲಾದವರು ಉಪಸ್ಥಿತರಿದ್ದರು.
ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.