ಉಳ್ಳಾಲ, ಐಕ್ಯತೆ ನಮ್ಮ ಸಮಾಜದಲ್ಲಿ ಇರಬೇಕು.ಐಕ್ಯತೆ ಇಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲರೂ ನೋಡುವುದು ಐಕ್ಯತೆಯನ್ನು ಆಗಿದೆ ಎಂದು ಸಯ್ಯಿದ್ ಅತ್ತಾವುಲ್ಲ ತಂಙಳ್ ಹೇಳಿದರು.
ಅವರು ಉಳ್ಳಾಲ ದರ್ಗಾ ಸಮಿತಿ ವತಿಯಿಂದ ಕೇಂದ್ರ ಜುಮಾ ಮಸೀದಿ ಸಭಾಂಗಣದಲ್ಲಿ ಭಾನುವಾರ ನಡೆದ ಖುರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಹಾಗೂ ಮರ್ಹೂಮ್ ಯು.ಕೆ. ಅಬ್ಬಾಸ್ ಹಾಜಿ, ಉಳ್ಳಾಲ ರವರ ಎರಡನೇ ವಾರ್ಷಿಕ ಅನುಸ್ಮರಣೆ, ಪ್ರಾರ್ಥನಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಬೆಳವಣಿಗೆ ನಮ್ಮ ಗುರಿ ಆಗಿದ್ದು, ಅದನ್ನು ಅಭಿವೃದ್ಧಿ ಪಡಿಸಬೇಕುಎಂದು ಕರೆ ನೀಡಿದರು
ಕಾವಳಕಟ್ಟೆ ಹಝ್ರತ್ ಫಾಝಿಲ್ ರಝ್ವಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಫಝಲ್ ಕೋಯಮ್ಮ ತಂಙಳ್ ದೊಡ್ಡ ಕ್ರಾಂತಿ ಮಾಡಿದ್ದರು. ಅವರನ್ನು ಸ್ಮರಿಸುವುದು ನಮ್ಮ ಜವಾಬ್ದಾರಿ ಎಂದರು. ಅಶ್ರಫ್ ತಂಙಳ್ ಆದೂರು ದುಆ ನೆರವೇರಿಸಿದರು.
ಡಾ.ಅಬ್ದುಲ್ ಹಕೀಮ್ ಅಝ್ ಹರಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ,ಅರೆಬಿಕ್ ಕಾಲೇಜು ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯ ಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಯ್ಯಿದ್ ಸಾದಾತ್ ತಂಙಳ್ ಸಮಾರೋಪ ದುಆ ನೆರವೇರಿಸಿದರು. ಈ ಕಾರ್ಯಕ್ರಮ ದಲ್ಲಿ ವಕ್ಫ್ ಜಿಲ್ಲಾ ನಿವೃತ್ತ ಅಧಿಕಾರಿ ಅಬೂಬಕ್ಕರ್, ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಜಿರೆ, ಇಬ್ರಾಹಿಂ ಸ ಅದಿ, ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ಊದ್ ತಂಙಳ್, ಮೊಹಮ್ಮದ್ ಫೈಝಿ ಪಟ್ಲ , ದರ್ಗಾ ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಇಸಾಕ್ ಪೇಟೆ ಕೋಶಾಧಿಕಾರಿ ನಾಝೀಮ್ ಮುಕಚೇರಿ, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಇಮ್ತಿಯಾಝ್ ಪಿಲಾರ್,ಅಲ್ತಾಫ್ ಹಳೆಕೋಟೆ, ದರ್ಗಾ ಮಾಜಿ ಅಧ್ಯಕ್ಷ ಹಾಜಿ ಯು.ಎಸ್.ಹಂಝ, ಅರೆಬಿಕ್ ಟ್ರಸ್ಟ್ ಮಾಜಿ ಕಾರ್ಯದರ್ಶಿ ಝಿಯಾದ್ ತಂಙಳ್ ಅಬ್ದುಲ್ ರಹ್ಮಾನ್, ಹಮೀದ್ ಉಳ್ಳಾಲ,ಝೈನುದ್ದೀನ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ, ಕೋಟೆಪುರ ಅಧ್ಯಕ್ಷ ಅಬ್ಬಾಸ್ ಹಾಜಿ, ಹಾಲಿ ಅಧ್ಯಕ್ಷ ಫಾರೂಕ್ ಹಾಜಿ, ಮುಸ್ತಫಾ ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.