Site icon Ullalavani

ಪುತ್ತೂರು ಬಸ್ ನಿಲ್ದಾಣದ ಬಳಿ ಯುವತಿಗೆ ಕಿರುಕುಳ ಆರೋಪ: ಮಾತಿನ ಚಕಮಕಿ, ತಳ್ಳಾಟ

ಪುತ್ತೂರು, ಜು.3: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಯುವತಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆದ ಘಟನೆ ವರದಿಯಾಗಿದೆ.

ಘಟನಾ ಸ್ಥಳದಲ್ಲಿ ಕೆಲವರು ಜಮಾಯಿಸಿ ಪರಸ್ಪರ ವಾಗ್ವಾದ ನಡೆಸಿದ್ದು, ಬಳಿಕ ತಳ್ಳಾಟ-ನೂಕಾಟವೂ ನಡೆದಿದೆ ಎನ್ನಲಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಘಟನೆಗೆ ಸಂಬಂಧಿಸಿದವರು ಅಲ್ಲಿಂದ ತೆರಳಿದ್ದರು ಎಂದು ತಿಳಿದು ಬಂದಿದೆ.

Exit mobile version