ಕುಲಶೇಖರ, ಜು. 2: ಹಿಂದೂ ಸೇವಾ ಸಮಿತಿ ಟ್ರಸ್ಟ್ (ರಿ), ಕುಲಶೇಖರ ಹಾಗೂ ಹಿಂದೂ ಸೇವಾ ಸಮಿತಿ ಮಾತೃ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ, ಸಾವಯವ ಕೃಷಿಕ ಗ್ರಾಹಕ ಬಳಗ (ರಿ), ಮಂಗಳೂರು ಇವರ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಜುಲೈ 5ರಂದು (ಭಾನುವಾರ) ಮಧ್ಯಾಹ್ನ 2.30ರಿಂದ 4.30ರವರೆಗೆ ಕುಲಶೇಖರ ಪೋಸ್ಟ್ ಆಫೀಸ್ ಎದುರಿನ ಓಂ ಶ್ರೀ ಶಕ್ತಿ ಗಣಪತಿ ಮಂದಿರದಲ್ಲಿ ಕಾರ್ಯಾಗಾರ ನಡೆಯಲಿದೆ.
ಕಾರ್ಯಾಗಾರದಲ್ಲಿ “ತಾರಸಿ ಕೈತೋಟ” ಹಾಗೂ “ವ್ಯಸ್ತ ಜೀವನ – ಸ್ವಸ್ಥ ಭೋಜನ” ವಿಷಯಗಳ ಕುರಿತು ತಜ್ಞರಿಂದ ಉಪಯುಕ್ತ ಮಾಹಿತಿ, ಪ್ರಾಯೋಗಿಕ ಪ್ರದರ್ಶನ ಹಾಗೂ ಮಾರ್ಗದರ್ಶನ ನೀಡಲಾಗುವುದು.
ಸಾವಯವ ಕೃಷಿ, ಮನೆ ಮೇಲ್ಛಾವಣಿಯಲ್ಲಿ ಕೈತೋಟ ನಿರ್ಮಾಣ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಸ್ವಾವಲಂಬಿ ಜೀವನಶೈಲಿಗೆ ಸಂಬಂಧಿಸಿದ ವಿಷಯಗಳನ್ನು ಕಾರ್ಯಾಗಾರದಲ್ಲಿ ವಿವರಿಸಲಾಗುವುದು.
ಆಸಕ್ತ ಸಾರ್ವಜನಿಕರು ಉಚಿತವಾಗಿ ನಡೆಯುವ ಈ ಮಾಹಿತಿ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಿಂದೂ ಸೇವಾ ಸಮಿತಿ ಟ್ರಸ್ಟ್ (ರಿ), ಕುಲಶೇಖರ ಪ್ರಕಟಣೆಯಲ್ಲಿ ಮನವಿ ಮಾಡಿದೆ.