Site icon Ullalavani

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ..!!

ಉಡುಪಿ, ಜು.01: ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲಿಯನ್ (40) ಗೋವಾದ ಕಲ್ಲಂಗೂಟ್‌  ಬೀಚ್ ಬಳಿಯ ಅತಿಥಿ ಗೃಹದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಸಂದೀಪ್ ಉಡುಪಿ ಜಿಲ್ಲೆಯ ಮಲ್ಪೆ ಮೂಲದವರು. ಸಂದೀಪ್ ಹಲವು ವರ್ಷಗಳ ಹಿಂದೆ ಪ್ರಮೋದ್ ಮಧ್ವರಾಜ್ ಅವರ ಆಪ್ತ  ಸಹಾಯಕ  ಕೆಲಸವನ್ನು ತೊರೆದಿದ್ದರು. ಪ್ರಸ್ತುತ ಅವರು ಪ್ರವಾಸೋದ್ಯಮ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಮಲ್ಪೆಯಲ್ಲಿ ಪ್ರವಾಸಿ ದೋಣಿಯನ್ನು ಹೊಂದಿದ್ದರು ಎಂದು ವರದಿಯಾಗಿದೆ.ಅವರು ಮೂರು ದಿನಗಳ ಹಿಂದೆ ಪ್ರವಾಸಕ್ಕೆಂದು ಗೋವಾಕ್ಕೆ ತೆರಳಿದ್ದರು. ಅವರ ಹಠಾತ್ ಸಾವು ಹೃದಯಾಘಾತದಿಂದ ಉಂಟಾಗಿದೆಯೇ ಅಥವಾ ಕೊಲೆ ನಡೆದಿವೆಯೇ ಎಂಬ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕಳವಳ ವ್ಯಕ್ತವಾಗಿದೆ.ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. 

Exit mobile version