Site icon Ullalavani

ಇಂದಿನಿಂದ 1 ತಿಂಗಳ ಕಾಲ ರಾಜ್ಯದಲ್ಲಿ ಎಸ್‌ಐಆರ್; ಚುನಾವಣಾಧಿಕಾರಿಗಳು, ಬಿಎಲ್‌ಓಗಳು ಮನೆ ಮನೆಗೆ ಭೇಟಿ

ಭಾರತದ ಚುನಾವಣಾ ಆಯೋಗವು ರಾಜ್ಯದಲ್ಲಿ ಇಂದಿನಿಂದ 1 ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಮಾಡಲಿದೆ. ಈಗಾಗಲೇ ಮ್ಯಾಪಿಂಗ್ ಮುಕ್ತಾಯವಾಗಿದ್ದು, ಚುನಾವಣಾಧಿಕಾರಿಗಳು, ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ.

ರಾಜ್ಯದಲ್ಲಿ 91.61% ಮ್ಯಾಪಿಂಗ್ ಆಗಿದ್ದು, 5,54,32,314 ಮತದಾರರ ಪೈಕಿ 5,07,79,810 ಮತದಾರರ ಮ್ಯಾಪಿಂಗ್ ನಡೆದಿದೆ. 46,52,504 ಮತದಾರರು ಮ್ಯಾಪಿಂಗ್ ಆಗಬೇಕಿದೆ. ಈ 5.55 ಕೋಟಿ ಮತದಾರರ ಪೈಕಿ ಅಸಲಿ ಯಾರು? ನಕಲಿ ಯಾರು? ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ.ನಕಲಿ, ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಬೇಕಿದೆ. ಮತದಾರರು ಅರ್ಜಿಯನ್ನ ತುಂಬಿ ಅರ್ಜಿಗೆ ಸಹಿ ಮಾಡಿ ಕೆಲವು ದಾಖಲೆಗಳನ್ನು ಸಲ್ಲಿಸಬೇಕಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಮೃತಪಟ್ಟವರು, ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಿದ್ದಾರೆ.ಬಿಎಲ್‌ಓಗಳು ಮನೆಗೆ ಭೇಟಿ ನೀಡಿ ಎಸ್‌ಐಆರ್ ಅರ್ಜಿ ನೀಡಲಿದ್ದಾರೆ. ಎಸ್‌ಐಆರ್ ಅರ್ಜಿಗೆ ಮಾಹಿತಿ ನೀಡಿ ಮತದಾರರು ಸಹಿ ಮಾಡಬೇಕು. ಎಸ್‌ಐಆರ್‌ನಲ್ಲಿ ಭಾಗಿಯಾಗಿ ಮಾಹಿತಿ ನೀಡಿದರೆ ಮಾತ್ರ ಮತದಾನದ ಹಕ್ಕು, ಇಲ್ಲದೇ ಹೋದರೆ ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ. ಅಕ್ಟೋಬರ್ 7, 2026ಕ್ಕೆ 18 ತುಂಬುವ ಯುವ ಮತದಾರರು ಅರ್ಜಿ ಹಾಕಬಹುದಾಗಿದೆ. ರಾಜ್ಯ ಚುನಾವಣಾ ಆಯೋಗ, ಜಿಬಿಎ ಹಾಗೂ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.

Exit mobile version