Site icon Ullalavani

ಬೀರಿ ಜಂಕ್ಷನ್‌ ತರಕಾರಿ ಅಂಗಡಿ ಮೇಲೆ ಬಿದ್ದ ಮರ


ಬೀರಿ: ಕೋಟೆಕಾರು ಬೀರಿ ಜಂಕ್ಷನ್‌ ಹೆದ್ದಾರಿ ಬದಿಯಲ್ಲೇ ಇರುವ ತರಕಾರಿ ಅಂಗಡಿ ಮೇಲೆ ಬೃಹತ್‌ ಗಾತ್ರದ ಆಲದ ಮರದ ಕೊಂಬೆಯೊಂದು ತುಂಡಾಗಿ ಬಿದ್ದಿದ್ದು, ಅಂಗಡಿಗೆ ಹಾಗೂ ಅಂಗಡಿಯಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಘಟನೆಯಿಂದ ವಿದ್ಯುತ್‌ ತಂತಿ ಮೇಲೆ ಮರದ ಕೊಂಬೆಗಳು ಬಿದ್ದಿರುವುದರಿಂದ ತಂತಿ ಬೀರಿ ಮಾಡೂರು ರಸ್ತೆಗೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ರಸ್ತೆಯುದ್ದಕ್ಕೂ ಕೆಲಸಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಸ್ಥಳೀಯ ರಿಕ್ಷಾ ಚಾಲಕರು ವಾಹನ ಹಾಗೂ ಮರದ ಕೊಂಬೆಗಳನ್ನು ತೆರವುಗೊಳಿಸುವಲ್ಲಿ ಸಹಕರಿಸಿದರೆ, ಮೆಸ್ಕಾಂ ಸಿಬ್ಬಂದಿ ವಿದ್ಯುತ್‌ ತಂತಿ ತೆರವು ಕಾರ್ಯಾಚರಣೆಗೆ ಇಳಿದಿದ್ದಾರೆ. ಸಂಜೆ ವೇಳೆ ಅರ್ಧ ಗಂಟೆ ಕಾಲ ಸುರಿದ ಭಾರೀ ಗಾಳಿ ಹಾಗೂ ಮಳಳೆಯಿಂದಾಗಿ ಅನಾಹುತ ಸಂಭವಿಸಿದೆ.

Exit mobile version