Site icon Ullalavani

ಜೀವನದ ಹಾಡು ನಿಲ್ಲಿಸಿದ ಜ್ಯೂನಿಯರ್‌ ಎಸ್.ಪಿ ಖ್ಯಾತಿಯ ಚಂದ್ರಹಾಸ್‌ ಸುವರ್ಣ


ತೊಕ್ಕೊಟ್ಟು: ಜ್ಯೂನಿಯರ್‌ ಎಸ್.ಪಿ  ಬಾಲಸುಬ್ರಹ್ಮಣ್ಯರೆಂದೇ ಖ್ಯಾತಿ ಪಡೆದಿದ್ದು, 40 ವರ್ಷಗಳಿಂದ ಹಾಡುಗಾರಿಕೆಯನ್ನೇ ಜೀವನವನ್ನಾಗಿಸಿದ್ದ, ತುಳು , ಕೊಂಕಣಿ ಸೇರಿದಂತೆ ಬಹುಭಾಷಾ ನಾಟಕಗಳಿಗೆ  ಹಾಡುಗಳನ್ನು ಹಾಡಿರುವ ತೊಕ್ಕೊಟ್ಟು ಕಾಪಿಕಾಡು ನಿವಾಸಿ ಚಂದ್ರಹಾಸ್‌ ಸುವರ್ಣ ತೊಕ್ಕೊಟ್ಟು (64) ಅಲ್ಪಕಾಲದ ಅಸೌಖ್ಯದಿಂದ ಇಂದು ತೊಕ್ಕೊಟ್ಟುವಿನ ಸ್ವಗೃಹದಲ್ಲಿ  ನಿಧನಹೊಂದಿದರು.
1980ರಿಂದ ಕೆ.ಎನ್‌ ಟೈಲರ್‌, ವಿಜಯ ಕುಮಾರ್‌ ಕೊಡಿಯಾಲ್‌ ಬೈಲ್‌ ಅವರ ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿದ್ದ  ಚಂದ್ರಹಾಸ್‌ ಸುವರ್ಣ ಅವರು ಜಿಲ್ಲೆಯ ಚಾನೆಲ್‌ ಗಳಲಿ ನಡೆಯುತ್ತಿದ್ದ ಸುರ್‌ ಸಂಗಮ್‌ ಕಾರ್ಯಕ್ರಮದಲ್ಲಿ ಗಾಯಕರಾಗಿದ್ದರು.  ಮಾಂಡ್‌ ಸೊ ಬಾಣ್‌  ಕೊಂಕಣಿ ಸೋದ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದರು. ಅಝೀಝ್‌ ಬೈಕಂಪಾಡಿಯವರ ಅಹಮದಾಕೊ ಚಿರಿ ,ವಿಜಯ ಸತೀಶ್‌ ಆರ್ಕೆಸ್ಟ್ರಾ ತಂಡ, ವೇವ್ಸ್‌ ಕೊಂಕಣಿ ಬ್ಯಾಂಡ್‌ , ಮಚ್ಛೇಂದ್ರನಾಥ್‌ ಪಾಂಡೇಶ್ವರ ತಂಡ ಹಾಗೂ ಮುಂಬೈನ ಹಲವು ನಾಟಕಗಳಿಗೂ ಹಾಡುಗಳನ್ನು ಹಾಡಿದ್ದಾರೆ.  80ರ ಅವಧಿಯಲ್ಲಿ ಗ್ಯಾಸ್‌ ಲೈಟ್‌ ಇಟ್ಟುಕೊಂಡು ನಡೆಯುತ್ತಿದ್ದ ನಾಟಕಗಳಲ್ಲಿ ಎರಡೇ ಮೈಕುಗಳಿದ್ದ ಸಂದರ್ಭದಲ್ಲಿ  ಹಾಡನ್ನು ಆರಂಭಿಸಿದವರು. ಎಸ್.ಪಿ ಬಾಲಸುಬ್ರಹ್ಮಣ್ಯಂ  ಸ್ವರ ಹೋಲಿಕೆ ಇದ್ದುದರಿಂದಾಗಿ, ಜ್ಯೂನಿಯರ್‌ ಎಸ್‌,ಪಿ ಎಂದೇ ಕರೆಯಲ್ಪಡುತ್ತಿದ್ದರು. ಮಂಗಳೂರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಅವರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಜೀವನದ ಹಾಡು ನಿಲ್ಲಿಸಿದ
ಜ್ಯೂನಿಯರ್‌ ಎಸ್.ಪಿ ಖ್ಯಾತಿಯ ಚಂದ್ರಹಾಸ್‌ ಸುವರ್ಣ
ತೊಕ್ಕೊಟ್ಟು: ಜ್ಯೂನಿಯರ್‌ ಎಸ್.ಪಿ  ಬಾಲಸುಬ್ರಹ್ಮಣ್ಯರೆಂದೇ ಖ್ಯಾತಿ ಪಡೆದಿದ್ದು, 40 ವರ್ಷಗಳಿಂದ ಹಾಡುಗಾರಿಕೆಯನ್ನೇ ಜೀವನವನ್ನಾಗಿಸಿದ್ದ, ತುಳು , ಕೊಂಕಣಿ ಸೇರಿದಂತೆ ಬಹುಭಾಷಾ ನಾಟಕಗಳಿಗೆ  ಹಾಡುಗಳನ್ನು ಹಾಡಿರುವ ತೊಕ್ಕೊಟ್ಟು ಕಾಪಿಕಾಡು ನಿವಾಸಿ ಚಂದ್ರಹಾಸ್‌ ಸುವರ್ಣ ತೊಕ್ಕೊಟ್ಟು (64) ಅಲ್ಪಕಾಲದ ಅಸೌಖ್ಯದಿಂದ ಇಂದು ತೊಕ್ಕೊಟ್ಟುವಿನ ಸ್ವಗೃಹದಲ್ಲಿ  ನಿಧನಹೊಂದಿದರು.
1980ರಿಂದ ಕೆ.ಎನ್‌ ಟೈಲರ್‌, ವಿಜಯ ಕುಮಾರ್‌ ಕೊಡಿಯಾಲ್‌ ಬೈಲ್‌ ಅವರ ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿದ್ದ  ಚಂದ್ರಹಾಸ್‌ ಸುವರ್ಣ ಅವರು ಜಿಲ್ಲೆಯ ಚಾನೆಲ್‌ ಗಳಲಿ ನಡೆಯುತ್ತಿದ್ದ ಸುರ್‌ ಸಂಗಮ್‌ ಕಾರ್ಯಕ್ರಮದಲ್ಲಿ ಗಾಯಕರಾಗಿದ್ದರು.  ಮಾಂಡ್‌ ಸೊ ಬಾಣ್‌  ಕೊಂಕಣಿ ಸೋದ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದರು. ಅಝೀಝ್‌ ಬೈಕಂಪಾಡಿಯವರ ಅಹಮದಾಕೊ ಚಿರಿ ,ವಿಜಯ ಸತೀಶ್‌ ಆರ್ಕೆಸ್ಟ್ರಾ ತಂಡ, ವೇವ್ಸ್‌ ಕೊಂಕಣಿ ಬ್ಯಾಂಡ್‌ , ಮಚ್ಛೇಂದ್ರನಾಥ್‌ ಪಾಂಡೇಶ್ವರ ತಂಡ ಹಾಗೂ ಮುಂಬೈನ ಹಲವು ನಾಟಕಗಳಿಗೂ ಹಾಡುಗಳನ್ನು ಹಾಡಿದ್ದಾರೆ.  80ರ ಅವಧಿಯಲ್ಲಿ ಗ್ಯಾಸ್‌ ಲೈಟ್‌ ಇಟ್ಟುಕೊಂಡು ನಡೆಯುತ್ತಿದ್ದ ನಾಟಕಗಳಲ್ಲಿ ಎರಡೇ ಮೈಕುಗಳಿದ್ದ ಸಂದರ್ಭದಲ್ಲಿ  ಹಾಡನ್ನು ಆರಂಭಿಸಿದವರು. ಎಸ್.ಪಿ ಬಾಲಸುಬ್ರಹ್ಮಣ್ಯಂ  ಸ್ವರ ಹೋಲಿಕೆ ಇದ್ದುದರಿಂದಾಗಿ, ಜ್ಯೂನಿಯರ್‌ ಎಸ್‌,ಪಿ ಎಂದೇ ಕರೆಯಲ್ಪಡುತ್ತಿದ್ದರು. ಮಂಗಳೂರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಅವರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

Exit mobile version