Site icon Ullalavani

ಮುಹಮ್ಮದ್ ಕೊಣಾಜೆ ನಿಧನ

ಕೊಣಾಜೆ : ಕೊಣಾಜೆಯ ನಿವಾಸಿ ಮುಹಮ್ಮದ್ ಕೊಣಾಜೆ(60) ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ನಿಧನರಾದರು.


ಮೃತರು ಶಹೀರ್ ಹುಸೈನ್, ಸಲ್ಮಾನ್ ಹಾಗೂ ಮೂವರು ಪುತ್ರಿಯರ ತಂದೆಯಾಗಿದ್ದು, ಕಿನ್ಯ ರೇಂಜ್ ಮದ್ರಸಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಇಬ್ರಾಹಿಂ ಕೊಣಾಜೆ ಅವರ ಹಿರಿಯ ಸಹೋದರ ಹಾಗೂ ದಿ| ಪುತ್ತಬ್ಬ ಕೋಡಿಜಾಲ್ ಅವರ ಹಿರಿಯ ಪುತ್ರರಾಗಿದ್ದರು. ಅಲ್ಲದೆ, ಫರಂಗಿಪೇಟೆಯ ಅಲಂಕಾರ್ ಬೀಡಿ ಸಂಸ್ಥೆಯ ಮಾಲಕರಾಗಿದ್ದ ದಿ| ಮುಹಮ್ಮದ್ ಹಾಜಿ ಅವರ ಪುತ್ರಿಯ ಪತಿಯಾಗಿದ್ದರು. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Exit mobile version