Site icon Ullalavani

ಸಂಸ್ಕಾರ ಮತ್ತು ಉತ್ತಮ ನಡವಳಿಕೆಯಿಂದ ಅತ್ಯುತ್ತಮ ನಾಯಕರಾಗಿ ಮೂಡಿ ಬರಲು ಸಾಧ್ಯ – ಎ ಸಿ ಪಿ ವಿಜಯಕ್ರಾಂತಿ

ಹರೇಕಳ : ಒಳ್ಳೆಯ ಸಂಸ್ಕಾರ, ಉತ್ತಮ ವ್ಯಕ್ತಿತ್ವ, ಉತ್ತಮ ಮಾತುಗಾರಿಕೆ ಹಾಗು ಕಠಿಣ ಪರಿಶ್ರಮದಿಂದ ಅತ್ಯುತ್ತಮ ನಾಯಕರಾಗಿ ಮೂಡಿಬರಲು ಸಾಧ್ಯ ಎಂದು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ   ವಿಜಯಕ್ರಾಂತಿ ಅವರು ಅಭಿಪ್ರಾಯ ಪಟ್ಟರು.

ಇವರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಿದ್ಯಾರ್ಥಿ ಸರಕಾರದ ಉದ್ಘಾಟನೆ ಮಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಶೆ ಮುಕ್ತ ಭಾರತ ಎನ್ನುವ ವಿಚಾರದಲ್ಲಿ ಮಾಹಿತಿ ನೀಡಿದ ಇವರು ಮಾದಕ ದ್ರವ್ಯಗಳು ಅಂದರೆ ಏನು ಎಂದು ನಿಮಗೆ ಗೊತ್ತಿರಬೇಕು ಅದನ್ನು ಸೇವನೆ ಮಾಡುವುದರಿಂದ ನಿಮ್ಮ ಬದುಕಿಗೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಸಹ ನೀವು ತಿಳಿದುಕೊಂಡಿರಬೇಕು ಮಾದಕ ವಸ್ತುವನ್ನು ಸೇವಿಸುವುದು ಅಪರಾಧ ಅದನ್ನು ಇನ್ನೊಬ್ಬರಿಗೆ ನೀಡುವುದು ಅತೀ ದೊಡ್ಡ ಅಪರಾಧ, ಹಾಗಾಗಿ ಜೀವನದಲ್ಲಿ ಒಮ್ಮೆ ದುಶ್ಚಟಗಳಿಗೆ ಅಂಟಿಕೊಂಡರೆ ಅದರಿಂದ ಸುಲಭದಲ್ಲಿ ಹೊರ ಬರಲು ಅಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೆ ಎನ್ ಆಳ್ವ ಅವರು ಮಕ್ಕಳು ನಾಯಕತ್ವ ಗುಣಗಳನ್ನು ಕಲಿತುಕೊಳ್ಳಬೇಕು ಮತ್ತು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು , ಇಂದು ಶಾಲೆಯಲ್ಲಿ ನಾಯಕರಾದವರು ಮುಂದೆ ದೇಶವನ್ನು ಮುನ್ನಡೆಸುವ ಪ್ರಜೆಗಳಾಗಿ ಮೂಡಿಬರಬೇಕು ಎಂದು ಶುಭವನ್ನು ಹಾರೈಸಿದರು

ಈ ಸಂದರ್ಭದಲ್ಲಿ ಶಾಲಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಮಹಮ್ಮದ್ ಸಫ್ಫಾನ್ ಶಾಹೀರ್, ಸಭಾಪತಿಯಾಗಿ ಫಾತಿಮಾ ಆಫೀಝ ಹೈದರ್ , ಸ್ವಚ್ಛತಾ ಮಂತ್ರಿ ಯತೀಕ್ಷ, ಸಾಂಸ್ಕೃತಿಕ ಮಂತ್ರಿ ಮನ್ವಿತ, ವಿದ್ಯಾ ಮಂತ್ರಿ ಜಯಲಕ್ಷ್ಮಿ, ಪ್ರವಾಸ ಮಂತ್ರಿ ರಿತೇಶ್, ಗ್ರಹ ಮಂತ್ರಿ ಫಾತಿಮಾ, ಪೀಠೋಪಕರಣ ಮಂತ್ರಿ ಸುದೀಪ , ನೀರಾವರಿ ಮಂತ್ರಿ ಕೀರ್ತನ್ , ಆಹಾರ ಮಂತ್ರಿ ಮುನಫ್, ಕೃಷಿ ಮಂತ್ರಿ ರಾಫೀಹ್, ಕ್ರೀಡಾ ಮಂತ್ರಿ ತಬ್ ಶೀರ್, ವಾರ್ತಾ ಮಂತ್ರಿ ಚಿತ್ರಾಕ್ಷಿ , ಬಿತ್ತಿ ಪತ್ರಿಕೆ ಮಂತ್ರಿ ತನ್ವಿಚಂದ್ರ, ಆರೋಗ್ಯ ಮಂತ್ರಿ ಶಾಹಿಲಾ, ಕಾರ್ಯಕ್ರಮ ನಿರ್ವಹಣಾ ಮಂತ್ರಿ ಫಾತಿಮಾ, ಬಿಸಿಯೂಟ ಮಂತ್ರಿ ಆಯಿಷಾ ಶಿಭಾ, ವಿರೋಧ ಪಕ್ಷದ ನಾಯಕಿಯಾಗಿ ಕೃತಿಕಾ ಇವರುಗಳು ಪ್ರಮಾಣ ವಚನ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಕಿರಿಯ ವಯಸಿನಲ್ಲೇ ಕಲಿಕೆಯಲ್ಲಿ ರಾಂಕ್ ಗಳಿಸಿ ಸಾಧನೆ ಮಾಡಿ, ಸಹಾಯಕ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ  ವಿಜಯಕ್ರಾಂತಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

 

ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕರು ಕಡೆಂಜ ಸೋಮಶೇಖರ್ ಚೌಟ, ಶೈಕ್ಷಣಿಕ ಮತ್ತು ಸಾಮಾಜಿಕ ಮುಂದಾಳು ಅಬೂಬಕ್ಕರ್ ಸಿದ್ದಿಕ್ ಸ್ವಾಗತ್ ಬಜಾರ್, ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ಸ್ವಾಗತಿಸಿದರು,ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ದ್ರುವಿತ ವರದಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕ ಕೃಷ್ಣ ಶಾಸ್ತ್ರೀ ವಂದಿಸಿದರು ಶಿಕ್ಷಕರುಗಳಾದ ಶಿವಣ್ಣ, ಸ್ಮಿತಾ, ಭವ್ಯ, ಯಶಸ್ವಿನಿ, ಮೋಹನ್, ರವೀಶ್ ಸಹಕರಿಸಿದರು.

Exit mobile version