Site icon Ullalavani

ಮಾತೃಶ್ರೀ ಬಡಾವಣೆಯ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ರ ಮನೆಯ ದಾರಿಗೆ ಅನುದಾನ ಮಂಜೂರಾದರೂ, ಟೆಂಡರ್‌ ಪೂರ್ಣಗೊಂಡಿಲ್ಲ : ಕೌನ್ಸಿಲರ್‌ ಹರೀಶ್‌ ರಾವ್‌ ಮಡ್ಯಾರ್

ಕೋಟೆಕಾರು: 11ನೇ ವಾರ್ಡಿನ ಶಾಸ್ತಾವು ಮಾತೃಶ್ರೀ ಬಡಾವಣೆಯ ನಿವಾಸಿ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ಅವರ ಮನೆಗೆ ಹೋಗಲು ಇರುವ ದಾರಿ ಸಂಪೂರ್ಣ ಹದಗೆಟ್ಟಿದ್ದು ಇಲ್ಲಿನ ದಾರಿಗೆ ಹಾಸುಗಲ್ಲು ಅಳವಡಿಸುವ ಕಾಮಗಾರಿಗಾಗಿ ಈಗಾಗಲೇ ₹1.50 ಲಕ್ಷ ಅನುದಾನವನ್ನು ಮೀಸಲಿರಿಸಲಾಗಿದೆ. ಆದರೆ ಅನುದಾನ ಮಂಜೂರಾಗಿ ಸುಮಾರು ಆರು ತಿಂಗಳುಗಳು ಕಳೆದಿದ್ದರೂ, ಇನ್ನೂ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದೇ ಕಾಮಗಾರಿ ಆರಂಭವಾಗಿಲ್ಲ
ಈ ವಿಷಯವನ್ನು ವಾರ್ಡಿನ ಸದಸ್ಯ ಹಾಗೂ ಕೌನ್ಸಿಲರ್‌ ಹರೀಶ್‌ ರಾವ್‌ ಮಡ್ಯಾರ್ ಅವರು ಕೋಟೆಕಾರು ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಅನುದಾನ ಲಭ್ಯವಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವ ಕಾರಣವನ್ನು ಅಧಿಕಾರಿಗಳಿಂದ ಪ್ರಶ್ನಿಸಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಹಾಸುಕಲ್ಲು ಅಳವಡಿಸುವ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ, ನಿವಾಸಿಗಳು ಹಾಗೂ ಶಾಲಾ ಮಕ್ಕಳು, ಹಿರಿಯ ನಾಗರಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ವಿಳಂಬಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.

Exit mobile version