Site icon Ullalavani

‘ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಹೋರಾಟ’- ವಿಜಯೇಂದ್ರ

ಮಂಗಳೂರು, ಜೂ. 26: ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಹೋರಾಟ ನಡೆಸಿ ಭ್ರಷ್ಟ ಕಾಂಗ್ರೆಸ್ ಸರಕಾರದ ಮುಖವಾಡವನ್ನು ಬಿಚ್ಚಿಡುವ ಕೆಲಸವನ್ನು ನಮ್ಮೆಲ್ಲ ಮುಖಂಡರ, ಕಾರ್ಯಕರ್ತರ ನೇತೃತ್ವದಲ್ಲಿ ಆಗಬೇಕಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.



ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಅವರು ಇಂದು ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪಕ್ಷದ ಸಂಘಟನೆ, ಲಕ್ಷಾಂತರ ಕಾರ್ಯಕರ್ತರ ಶಕ್ತಿಯ ಬಗ್ಗೆ ನನಗೆ ವಿಶ್ವಾಸವಿದೆ. ಜನವಿರೋಧಿ, ಬಡವರ ವಿರೋಧಿ, ರೈತರ ವಿರೋಧಿ, ಯುವಕರ ವಿರೋಧಿ ದುಷ್ಟ ಕಾಂಗ್ರೆಸ್ ಸರಕಾರವನ್ನು ಮುಂಬರುವ ದಿನಗಳಲ್ಲಿ ಬುಡಸಮೇತ ಕಿತ್ತು ಹಾಕುವ ಕೆಲಸವು ನಮ್ಮೆಲ್ಲ ಕಾರ್ಯಕರ್ತರ ಶ್ರಮದಿಂದ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಸಂಬಂಧ ಅನೇಕ ಶಾಸಕರು ದೂರವಾಣಿ ಕರೆ ಮಾಡಿದ್ದಾರೆ.

ಹಿಂದಿನ ಸಿದ್ದರಾಮಯ್ಯನವರ ಸರಕಾರ 5 ವರ್ಷ ಕಾಲ ಆಡಳಿತ ನಡೆಸಿತ್ತು. ಆಗ ರಾಜ್ಯದಲ್ಲಿ 18ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ಆಗಿತ್ತೆಂಬುದನ್ನು ಈಶ್ವರಪ್ಪ ಅವರು ಮರೆತಿರಬಹುದು ಎಂದು ತಿಳಿಸಿದರು. ಸಾವಿರಾರು ಕಾರ್ಯಕರ್ತರ ಮೇಲೆ, ಹಿಂದೂ ಕಾರ್ಯಕರ್ತರ ವಿರುದ್ಧ ಮೊಕದ್ದಮೆ ಹಾಕಿ ಅವರನ್ನು ಕುಗ್ಗಿಸುವ ಷಡ್ಯಂತ್ರವೂ ಅಂದಿನ ಕಾಂಗ್ರೆಸ್ ಸರಕಾರದಲ್ಲಿ ನಡೆದಿತ್ತು ಎಂದು ವಿವರಿಸಿದರು.


ಅಂಥ ಸಂದರ್ಭದಲ್ಲಿ ಆ 17 ಶಾಸಕರು ನಮ್ಮ ಜೊತೆ ಕೈಜೋಡಿಸಿದ್ದರಿಂದ ಒಳ್ಳೆಯ ಆಡಳಿತವನ್ನು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ನೀಡಲು ಸಾಧ್ಯವಾಗಿದೆ. ನೂರಾರು- ಸಾವಿರಾರು ಕಾರ್ಯಕರ್ತರಿಗೆ ವಿವಿಧ ನಿಗಮಗಳಲ್ಲಿ ಅವಕಾಶ ಲಭಿಸಿದೆ ಎಂದು ವಿಶ್ಲೇಷಿಸಿದರು. ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಏನು ಕೆಲಸ ಮಾಡಿದರೆಂದು ಚರ್ಚಿಸಲು ಹೋಗುವುದಿಲ್ಲ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರು; ಅವೆಲ್ಲ ಪ್ರಸ್ತುತವಲ್ಲ ಎಂದರು. ಎಂಜಾಯ್ ಮಾಡಿದ್ದನ್ನು ಮರೆತರೆಂದು ಕಾಣುತ್ತದೆ ಎಂದು ತಿಳಿಸಿದರು.ಅಡ್ಡ ಮತದಾನ ಮಾಡಿ ಪಕ್ಷಕ್ಕೆ ದ್ರೋಹ ಮಾಡಿದವರ ಬಗ್ಗೆ ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸತ್ಯ ಇಂದಲ್ಲ ನಾಳೆ ಹೊರಕ್ಕೆ ಬರಲಿದೆ ಎಂದರು. ಅಡ್ಡ ಮತದಾನದ ಚರ್ಚೆಗೆ ಇವತ್ತಿಗೆ ಇತಿಶ್ರೀ ಹಾಡೋಣ ಎಂದು ಹೇಳಿದರು. ರಾಜ್ಯದಾದ್ಯಂತ ಪ್ರವಾಸ ಮಾಡಿ ಸಂಘಟನೆ ಬಲಪಡಿಸಲಾಗುವುದು. ರಾಜ್ಯದ ಮುಖ್ಯಮಂತ್ರಿಗಳು ಎಷ್ಟು ಬಲಿಷ್ಠವಾಗಿದ್ದರೂ ಹೆದರಲ್ಲ. ಸಿಎಂ ಆರ್ಭಟ ಏನೇ ಇರಲಿ ಮುಂದಿನ ಬಾರಿ ನಮ್ಮ ಪಕ್ಷವೇ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಒಳ್ಳೆಯ ಆಡಳಿತ ಕೊಡುತ್ತೇವೆ ಎಂಬ ವಿಶ್ವಾಸ ಇದೆ. ಮುಂದಿನ ಎರಡು ವರ್ಷ ಸಂಘಟನೆಗೆ ಶಕ್ತಿ ತುಂಬುತ್ತೇನೆ ಎಂದರುಅಡ್ಡ ಮತದಾನ, ಸತ್ಯ ತಿಳಿಯಲಿದೆ.


ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ಬಗ್ಗೆ ಗೊತ್ತಾಗಲಿದೆ. ಗೌಪ್ಯ ಮತದಾನ ತಿಳಿಯುವುದಿಲ್ಲ ಎಂದು ನಮ್ಮ ಶಾಸಕರು ಬಯಸಿದರೆ ಸುಳ್ಳು. ಎಲ್ಲಾ ಮಾಹಿತಿಯನ್ನು ಕೇಂದ್ರದ ವರಿಷ್ಠರಿಗೆ ತಿಳಿಸಿದ್ದೇನೆ. ಪಕ್ಷಕ್ಕೆ ಯಾರೇ ದ್ರೋಹ ಬಗೆದಿದ್ದರೂ ಬಿಡುವುದಿಲ್ಲ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಎಲ್ಲಾ ಮಾಹಿತಿ ನೀಡಿದ್ದೇನೆ ಎಂದು ವಿವರಿಸಿದರು. ಎಸ್.ಟಿ ಸೋಮಶೇಖರ್ ಅವರು ನಮ್ಮ ಪಕ್ಷದ ಮೂವರು ಶಾಸಕರ ಜೊತೆ ಸಂಪರ್ಕ ಮಾಹಿತಿ ಇದೆ. ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಸತ್ಯ ಏನು ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು.ಡಿ.ವಿ.ಸದಾನಂದ ಗೌಡ ಅವರು ವಿಧಾನ ಪರಿಷತ್ ಚುನಾವಣೆ ನಂತರ ಕರೆ ಮಾಡಿ ಮಾತನಾಡಿದ್ದರು. ಅದರ ಮಾಹಿತಿಯನ್ನು ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಿದ್ದೇನೆ. ಕೆಲವು ಶಾಸಕರನ್ನು ಸಂಪರ್ಕಿಸುವ ಕೆಲಸವನ್ನು ಕಾಂಗ್ರೆಸ್ ನವರು ಮಾಡ್ತಾ ಇದ್ದಾರೆ ಎಂಬ ಮಾಹಿತಿಗಳಿವೆ. ಸದಾನಂದ ಗೌಡ ಅವರು ಒಳ್ಳೆ ಉದ್ದೇಶದಿಂದ ಹೇಳಿದ್ದಾರೆ. ನಾವು ಅನುಮಾನ ಪಡುವುದಾದರೆ ಎಲ್ಲಾ ಬಿಜೆಪಿ ಶಾಸಕರ ಮೇಲೆ ಅನುಮಾನ ಪಡಬೇಕು ಎಂದು ಹೇಳಿದರು.

Exit mobile version