Site icon Ullalavani

ಮಂಗಳೂರಿನ ಮಾಜಿ ಮೇಯರ್ ಹಿಲ್ಡಾ ಆಳ್ವ ನಿಧನ…!!

ಮಂಗಳೂರು, ಜೂ. 26: ಮಂಗಳೂರಿನ ಮಾಜಿ ಮೇಯರ್ ಮತ್ತು ಹಿರಿಯ ರಾಜಕಾರಣಿ ಹಿಲ್ಡಾ ಆಳ್ವ ಅವರು ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 



ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.ಮಂಗಳೂರಿನ ಪ್ರಗತಿಪರ ನಾಯಕಿಯಾಗಿದ್ದ ಹಿಲ್ಡಾ ಆಳ್ವ, ಮೇಯರ್ ಆಗಿದ್ದ ಅವಧಿಯಲ್ಲಿ ನಗರದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದರು. ಜನಪರ ಆಡಳಿತದ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಹಿಲ್ಡಾ ಆಳ್ವ ಅವರ ನಿಧನಕ್ಕೆ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಮತ್ತು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Exit mobile version