Site icon Ullalavani

ಪಠ್ಯಪುಸ್ತಕದಲ್ಲಿ ತುರ್ತುಪರಿಸ್ಥಿತಿಯ ಬಗ್ಗೆ ಪಾಠ ಸೇರ್ಪಡೆ ಸ್ವಾಗತಾರ್ಹ

ದೇಶದ ಪ್ರಜಾಪ್ರಭುತ್ವವನ್ನು ಹರಣ ಮಾಡಿದ ರಾಷ್ಟ್ರೀಯ ತುರ್ತುಪರಿಸ್ಥಿತಿ ಬಗ್ಗೆ 9 ನೇ ತರಗತಿಯ ಸಿ.ಬಿ.ಎಸ್.ಸಿ. ಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ, ಸಮಾಜವನ್ನು ಅರಿತುಕೊಳ್ಳಿ ಭಾಗದಡಿ ಪಾಠವಾಗಿ ಸೇರ್ಪಡೆಗೊಳಿಸಿರುವುದು ಸ್ವಾಗತಾರ್ಹ.

ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅಧಿಕಾರದ ಲಾಲಸೆಗೆ ದೇಶದ ಸಂವಿಧಾನದ ಅಶಯವನ್ನೇ ದಿಕ್ಕರಿಸಿದ ಘೋರ ಕೃತ್ಯ ಇದಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರರಾದ ಜೀವನ್ ಕುಮಾರ್ ತೊಕ್ಕೊಟು ಅಭಿಪ್ರಾಯ ವ್ಯಕ್ತಪಡಿಸಿದರು.
ತುರ್ತುಪರಿಸ್ಥಿತಿ ದೇಶದ ಸಂವಿಧಾನಕ್ಕೆ ಮಾಡಿದ ನೇರ ದಾಳಿಯಾಗಿದೆ. ರಾಜಕೀಯ ನಾಯಕರ, ಪತ್ರಕರ್ತರ, ಸಾಮಾಜಿಕ ನಾಯಕರನ್ನು ವಿನಾ ಕಾರಣ ಬಂದಿಸಲಾಗಿತ್ತು. ಇದರ ವಿರುದ್ಧ ದೇಶಾದ್ಯಂತ ನಡೆದ ಹೋರಾಟ ದೇಶದ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಕಾಂಗ್ರೆಸ್ ಸರ್ಕಾರ ನಕಲಿ ಇತಿಹಾಸವನ್ನು ಸೃಷ್ಟಿಸಿ ಜನರ ಹಾದಿ ತಪ್ಪಿಸಿತ್ತು. ಯುವ ಪೀಳಿಗೆಗೆ ನೈಜ ಚರಿತ್ರೆಯ ‌ಅರಿವು ಆಗಬೇಕಿದೆ ಎಂದು ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Exit mobile version