Site icon Ullalavani

ಭಾರತದ ಸಂಸ್ಕøತಿಯಲ್ಲಿ ಮದುವೆಯೆಂದರೆ ಮಾನಸಿಕ ಬಂಧನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುತ್ತಾರು: ಮನಸ್ಸಿನ,ಆತ್ಮದ ಒಳಗಿನಿಂದ ಕಾಪಾಡಿಕೊಂಡು ಗೌರವಿಸಿಕೊಂಡು ಬರುವಂತಹ ಒಂದು ಪವಿತ್ರ ಭಾವನೆಯೇ ಮದುವೆಯ ಮೂಲಮಂತ್ರ . ಧರ್ಮವನ್ನು ಅನುಸರಿಸಿಕೊಂಡು , ಸಂಸ್ಕøತಿಯ ಪರಂಪರೆಯನ್ನು ಬೆಳೆಸಿಕೊಂಡು ಹೋಗುವುದೇ ದಂಪತಿ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮದ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಹಾಗೂ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಅಭಿಪ್ರಾಯಪಟ್ಟರು.

ಅವರು ಕುತ್ತಾರು ಬಾಲ ಸಂರಕ್ಷಣಾ ಕೇಂದ್ರದಲ್ಲಿ ನಡೆದ ನವ ದಂಪತಿ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ದಾಂಪತ್ಯ ಜೀವನ ತೀರಾ ಹದಗೆಟ್ಟಿದೆ. ಈ ಸಂದರ್ಭ ದಂಪತಿಗೆ ಮಾರ್ಗದರ್ಶನ ಮಾಡುವ ಶಿಶುಮಂದಿರದ ಕೆಲಸ ಶ್ಲಾಘನೀಯ. ವಿದೇಶಗಳಲ್ಲಿ ಮದುವೆ ಎಂದರೆ ವ್ಯಾವಹಾರಿಕ ಒಪ್ಪಂದದಂತೆ. ಆದರೆ ಭಾರತದ ಸಂಸ್ಕøತಿಯಲ್ಲಿ ಮದುವೆಯೆಂದರೆ ಮಾನಸಿಕ ಬಂಧನ. ಜೀವನ ಪರ್ಯಂತ ಪಾವಿತ್ರ್ಯತೆಯಿಂದ ಕಾಪಾಡಿಕೊಂಡು ಬರುವ ಪದ್ಧತಿ ಎಂಬರ್ಥ. ಮಹಾನ್ ಪರಂಪರೆಯುತ ದೇಶದಲ್ಲಿ ಭಾವನೆಗಳಿಗೆ ಬೆಲೆ ಕೊಟ್ಟು ಬದುಕಬೇಕಿದೆ. ದಂಪತಿಗಳು ಮನೆಯ ಎಲ್ಲರನ್ನು ಜತೆಯಾಗಿ ಬದುಕುವಂತೆ ಮಾಡುವ ಸಂಕಲ್ಪವನ್ನು ಕೈಗೊಂಡವರು. ಅದರಂತೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಮದುವೆಯ ಸಂಕಲ್ಪವನ್ನು ಈಡೇರಿಸುವುದರಿಂದ ಜೀವನದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದು. ಪರಸ್ಪರರ ಭಾವನೆಗಳನ್ನು ಗೌರವಿಸಿಕೊಂಡು ಒಟ್ಟಾಗಿ ಬದುಕುವುದು ಮದುವೆಯ ಉದ್ದೇಶ ಎಂದ ಅವರು ಗೃಹಿಣಿ ಗೃಹಮುಚ್ಯತೆ ಸ್ತ್ರೀಯನ್ನು ಉನ್ನತ ಭಾವನೆಗಳೊಂದಿಗೆ ಆಧರಿಸಿ, ಗೌರವಿಸಿ ಜೀವನ ಸಾಗಿಸುವುದು ಅವಶ್ಯಕ.

ಸಂತಾನ ಅಭಿವೃದ್ಧಿಯಿಂದ ಮನೆ ತುಂಬಾ ಮಕ್ಕಳಿದ್ದರೆ ಅದೊಂದು ಸೌಭಾಗ್ಯ. ಮನೆಯೆಂದರೆ ಧಾರ್ಮಿಕ , ಸಾಂಸ್ಕøತಿಕ ಪರಂಪರೆಯ ಕೇಂದ್ರವಾಗಿದ್ದು, ತಾಯಿಯಿಂದಲೇ ಅದನ್ನು ಉಳಿಸಿ ಬೆಳೆಸುವ ಕಾರ್ಯ ಆದಲ್ಲಿ ಮಕ್ಕಳು ಹಿರಿಯರನ್ನು ಅನುಸರಿಸುವುದರೊಂದಿಗೆ ಉತ್ತಮ ನಡೆನುಡಿಗಳನ್ನು ಪಾಲಿಸುವವರಂತಾಗುತ್ತಾರೆ ಎಂದರು.

ಕುಟುಂಬ ಪ್ರಭೋದನಾ ಪ್ರಮುಖ ಸು.ರಾಮಣ್ಣ ಮಾತನಾಡಿ ಮದುವೆ ಎಂಬುದು ಮೋಜಿನಾಟವಲ್ಲ. ದೇಶದಲ್ಲಿ ಮದುವೆ ಎಂದರೆ ಸಂತೋಷ, ಸಂಭ್ರಮದ ಜತೆಗೆ ಸಂಸ್ಕಾರ, ಸಂಬಂಧ ವೃದ್ಧಿಸುವಂತದ್ದಾಗಿದೆ. ಸರಸವಾದ, ಸುರಸವಾದ ದಾಂಪತ್ಯ ಜೀವನ ಬೇರೆ ಯಾವ ದೇಶದಲ್ಲೂ ಇಲ್ಲ. ಜೀವನದಲ್ಲಿ ಸುಖವನ್ನು ಪಡೆಯುವ ಏಕಮಾತ್ರ ಉದ್ದೇಶ ಇಟ್ಟುಕೊಂಡಲ್ಲಿ ದುರಂತ ಆಗಬಹುದು. ಸಮಾಜದ ಋಣವನ್ನು ತೀರಿಸುವ ಉದ್ದೇಶವನ್ನು ಇಟ್ಟುಕೊಂಡಲ್ಲಿ ಮುಂದಿನ ಪೀಳಿಗೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಬಹುದು. ಮಕ್ಕಳನ್ನು ದೇಶದ ಸಂಪತ್ತಾಗುವಂತೆ ಬೆಳೆಸಬೇಕಿದೆ. ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಆಹಾರ ಪದ್ಧತಿ ಸಾತ್ವಿಕವಾಗಿರಬೇಕು. ಹೆಚ್ಚು ತೀಕ್ಷ್ಣ ಆಹಾರವನ್ನು ಸೇವಿಸಬಾರದು. ದೂರದರ್ಶನದಲ್ಲಿ ಬರುವ ಉತ್ತಮ ಕಾರ್ಯಕ್ರಮಗಳನ್ನು ವೀಕ್ಸಿಸಿ, ಉತ್ತಮ ಸಾಹಿತ್ಯವನ್ನು ಓದಿ, ಮನೆಗಳಲ್ಲಿ ಭಜನೆ, ರಾಮರಕ್ಷಾ ಸ್ತೋತ್ರ, ಶ್ಲೋಕಗಳನ್ನು ಪಠಿಸಿ, ಈ ಮೂಲಕ ಮಕ್ಕಳನ್ನು ಆದರ್ಶಪ್ರಯರನ್ನಾಗಿಸಬಹುದು ಎಂದರು.
ಕಾರ್ಯಕ್ರಮವನ್ನು ಹಿರಿಯ ದಂಪತಿಗಳಾದ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಇದರ ಭೌತಶಾಸ್ತ್ರ ವಿಭಾಗದ ಪೆÇ್ರ|ಎಂ.ಬಾಲಕೃಷ್ಣ ಹಾಗೂ ಸುಮನಾ ದೇವಿ ಚಿನ್ಮಯ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಿಕ ಸಮಿತಿಯ ಸಹ ಸಂಚಾಲಕಿ ಡಾ| ಕಮಲಾ ಭಟ್ ಕಲ್ಲಡ್ಕ, ಕುತ್ತಾರು ಬಾಲ ಸಂರಕ್ಷಣಾ ಕೇಂದ್ರದ ಸಂಚಾಲಕ ಡಾ. ಪಿ. ಅನಂತಕೃಷ್ಣ ಭಟ್, ಕಿನ್ಯ ಕೇಶವ ಶಿಶು ಮಂದಿರದ ಅಧ್ಯಕ್ಷ ಶಿವರಾಮ ಶೆಟ್ಟಿ ಸಾಂತ್ಯಗುತ್ತು ಉಪಸ್ಥಿತರಿದ್ದರು.

ಕಿನ್ಯ ಕೇಶವ ಶಿಶು ಮಂದಿರದ ವ್ಯವಸ್ಥಾ ಪ್ರಮುಖ್ ನಾರಾಯಣ ಕಜೆ ಸ್ವಾಗತಿಸಿದರು. ಕೇಶವ ಕಜೆ ಧನ್ಯವಾದ ವಂದಿಸಿದರು. ದಯಾನಂದ ತೊಕ್ಕೊಟ್ಟು ಮತ್ತು ವಾರಿಜ ವಿ. ಶೆಟ್ಟಿ ಕೊಂಡಾಣ ಕಾರ್ಯಕ್ರಮ ನಿರ್ವಹಿಸಿದರು.

Exit mobile version