Site icon Ullalavani

ಪ್ರತೀ ಗಲ್ಲಿಗಳ ಅಭಿವೃದ್ಧಿ, ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಬಿಜೆಪಿ ಧ್ಯೇಯ,ಉದ್ದೇಶ; ಎಂಎಲ್ಸಿ ಕಿಶೋರ್ ಕುಮಾರ್

ಉಳ್ಳಾಲ: ರಸ್ತೆ ಕಾಂಕ್ರಿಟೀಕರಣ, ಹೆದ್ದಾರಿ, ಚರಂಡಿ ನಿರ್ಮಾಣದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ಪ್ರತಿಯೊಂದು ಗಲ್ಲಿಗಳೂ ಅಭಿವೃದ್ಧಿಗೊಂಡು, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಅಂತ್ಯೋದಯ ಪರಿಕಲ್ಪನೆಯಂತೆ ಸಮಾಜದ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕುವಂತಾಗುವುದೇ ಭಾರತೀಯ ಜನತಾ ಪಾರ್ಟಿಯ ಧ್ಯೇಯ,ಉದ್ದೇಶವಾಗಿದೆಯೆಂದು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.


ಉಳ್ಳಾಲ ಬೈಲು ವೈದ್ಯನಾಥ ನಗರ ಒಂದನೇ ಅಡ್ಡ ರಸ್ತೆಯಲ್ಲಿ ವಿಧಾನ ಪರಿಷತ್ ನ ಶಾಸಕ ನಿಧಿಯ ಎಂಟು ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಮಳೆ ನೀರಿನ ಚರಂಡಿಯನ್ನು ಮಂಗಳವಾರದಂದು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಭಾರಿ ವರುಣನ ಆರ್ಭಟದಿಂದ ಉಳ್ಳಾಲ ಬೈಲ್ ಪ್ರದೇಶದ ಅನೇಕ ಮನೆಗಳು ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿ ಜನ ಸಾಮಾನ್ಯರು ಕಂಗಾಲಾಗಿದ್ದರು. ಈ ಪ್ರದೇಶದ ಜನರ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿ ಚರಂಡಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆಯೆಂದರು.


ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕೆ ಸಾಥ್, ಸಬ್ ಕಾ ವಿಕಾಸ್ ಪರಿಕಲ್ಪನೆಯಡಿಯಲ್ಲಿ ವಿದಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಅವರು ಉಳ್ಳಾಲ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನಕೊಟ್ಟಿರುವುದು ನಮಗೆಲ್ಲ ಶಕ್ತಿ ನೀಡಿದಂತಾಗಿದೆಯೆಂದರು.

ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್,ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು,ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ,ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್.ಕೆ.ಆರ್,ಮುಖಂಡರಾದ ಬಾಬು ಬಂಗೇರ,ಯಶವಂತ ಅಮೀನ್,ಮೀರಾ,ಮಹಿಳಾ ಮೋರ್ಚದ ಮಂಡಲ ಅಧ್ಯಕ್ಷರಾದ ಮಾಧವಿ ಉಳ್ಳಾಲ್,ಯುವ ಮೋರ್ಚದ ಅಧ್ಯಕ್ಷರಾದ ಮುರಳಿ ಕೊಣಾಜೆ,ರೈತ ಮೋರ್ಚದ ಪದ್ಮನಾಭ ಗಟ್ಟಿ,ಪ್ರಮುಖರಾದ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು,ಸುಜಾತ ಶೆಟ್ಟಿ,ಉದಯ ಆರ್.ಕೆ,ಪ್ರಕಾಶ್,ವಿಜಯ್,ಗುಣವತಿ ರೋಹಿದಾಸ್ ಬಂಗೇರ,ಜೀವನ್ ಉಳ್ಳಾಲ್,ಸೋಮೇಶ್ವರ ಪುರಸಭಾ ಸದಸ್ಯೆ ಸ್ವಪ್ನ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಪ್ರ.ಕಾ ದಯಾನಂದ ತೊಕ್ಕೊಟ್ಟು ಸ್ವಾಗತಿಸಿದರು. ಜಿಲ್ಲಾ ವಕ್ತಾರರಾದ ಜೀವನ್ ಕುಮಾರ್ ತೊಕ್ಕೊಟ್ಟು ನಿರೂಪಿಸಿದರು.

ಸಂಸದರ ನಿಧಿಯಿಂದ ರಸ್ತೆ ನಿರ್ಮಾಣಕ್ಕೆ ಹತ್ತು ಲಕ್ಷ,ವಿದಾನ ಪರಿಷತ್ ಶಾಸಕ ನಿಧಿಯಿಂದ‌ ಚರಂಡಿ ನಿರ್ಮಾಣಕ್ಕೆ ಎಂಟು ಲಕ್ಷ ರೂಪಾಯಿ ಸೇರಿದಂತೆ ಒಟ್ಟು ಹದಿನೆಂಟು ಲಕ್ಷ ರೂಪಾಯಿ ಅನುದಾನವನ್ನು ಉಳ್ಳಾಲ ಬೈಲ್ ವಾರ್ಡ್ ಒಂದಕ್ಕೆ ನೀಡಲಾಗಿದೆ.ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಮತ್ತಷ್ಟು ಉತ್ತರೋತ್ತರ ‌ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು.

ಜಗದೀಶ ಆಳ್ವ ಕುವೆತ್ತಬೈಲು. ಅಧ್ಯಕ್ಷರು,ಬಿಜೆಪಿ ಮಂಗಳೂರು ಮಂಡಲ

Exit mobile version