Site icon Ullalavani

ಶ್ರೀ ಕೃಷ್ಣ ಭಜನಾ ಮಂಡಳಿ ಸುದರ್ಶನ ನಗರ ಪಜೀರು: ನೂತನ ಪದಾಧಿಕಾರಿಗಳ ಆಯ್ಕೆ

ಪಜೀರು, ಜೂನ್ 23: ಶ್ರೀ ಕೃಷ್ಣ ಭಜನಾ ಮಂಡಳಿ (ರಿ.) ಸುದರ್ಶನ ನಗರ ಪಜೀರು ಇದರ 63ನೇ ವರ್ಷದ ವಾರ್ಷಿಕ ಮಹಾಸಭೆಯು ಮಂದಿರದ ಅಧ್ಯಕ್ಷ ವಿಜೇತ್ ಪಜೀರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯಶೋಧರ ಜೆ. ಜೋಗಿಬೆಟ್ಟು, ಉಪಾಧ್ಯಕ್ಷರಾಗಿ ಸದಾಶಿವ ಶೆಟ್ಟಿ (ದತ್ತ ನಿಕೇತನ), ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಪಜೀರು, ಜೊತೆ ಕಾರ್ಯದರ್ಶಿಯಾಗಿ ಸುದರ್ಶನ್ ದುರ್ಗಾ, ಕೋಶಾಧಿಕಾರಿಯಾಗಿ ನವೀನ್ ಪ್ರಕಾಶ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿರ್ಮಲ್ ಭಟ್ ವೈ. ಆಯ್ಕೆಯಾದರು.

ಲೆಕ್ಕ ಪರಿಶೋಧಕರಾಗಿ ತಾರನಾಥ ವರ್ಮ ಪಜೀರು ಅವರನ್ನು ನೇಮಕ ಮಾಡಲಾಯಿತು. ಗೌರವ ಸಲಹೆಗಾರರಾಗಿ ಸೇಸಪ್ಪ ಪೂಜಾರಿ, ಸೀತಾರಾಮ ಶೆಟ್ಟಿ ಮುಗುಳಿ, ವಿಜೇತ್ ಪಜೀರು, ಆಂಡಿ ಸುದರ್ಶನ ನಗರ, ಜಯರಾಮ ಶೆಟ್ಟಿ ಕಂಬಳಪದವು, ಕೆ.ಎಂ. ಬಾಲಕೃಷ್ಣ, ತುಕ್ಕೋಜಿ ರಾವ್ ಪೆರ್ಣಪಾಡಿ ಹಾಗೂ ಜಯರಾಮ ಶೆಟ್ಟಿ ಕೆಳಗಿನ ಮನೆ ಅವರನ್ನು ಆಯ್ಕೆ ಮಾಡಲಾಯಿತು.

ಭಜನಾ ಸಂಚಾಲಕರಾಗಿ ವಸಂತ್ ಜಿ. ಸುದರ್ಶನ ನಗರ, ಪಿ.ಕೆ. ರಾಮ ಕುಂಟಲಹಿತ್ಲು ಹಾಗೂ ಗಂಗಾಧರ ಪೂಜಾರಿ ಸುದರ್ಶನ ನಗರ ಆಯ್ಕೆಯಾದರೆ, ಸಂಘಟನಾ ಕಾರ್ಯದರ್ಶಿಗಳಾಗಿ ಜಯಾನಂದ ಶೆಟ್ಟಿ, ರವಿ ಪ್ರಶಾಂತ್ ಶೆಟ್ಟಿ, ಗೀತೇಶ್, ಗಣೇಶ್, ಗುಣಪಾಲ್, ಶಿವಪ್ರಸಾದ್ ಚೌಟ ಹಾಗೂ ಮೋಹನದಾಸ್ ಕಾಪಿಕಾಡ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ಮಂಡಳಿಯ ಮುಂದಿನ ಕಾರ್ಯಕ್ರಮಗಳು, ಭಜನಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ನೂತನ ಪದಾಧಿಕಾರಿಗಳಿಗೆ ಸದಸ್ಯರು ಶುಭ ಹಾರೈಸಿದರು.

Exit mobile version