Site icon Ullalavani

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸೋಮೇಶ್ವರ ಇದರ ಅಧ್ಯಕ್ಷರಾಗಿ ರಾಘವ ಆರ್ ಉಚ್ಚಿಲ್ ಆಯ್ಕೆ

ಸೋಮೇಶ್ವರ: ಸೋಮೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಚರಣೆ ಪ್ರಯುಕ್ತ ಸಮಿತಿ ರಚಿಸಿದ್ದು ಇದರ ಗೌರವ ಪ್ರಧಾನ ಮಾರ್ಗದರ್ಶಿಯಾಗಿ ಸೂರ್ಯನಾರಾಯಣ ಹೊಳ್ಳ, ಗೌರವಾಧ್ಯಕ್ಷರು ದಿನೇಶ್ ಕಾಜವ, ಜನಾರ್ಧನ್ ಹೊಳ್ಳ, ರವೀಂದ್ರನಾಥ್ ರೈ, ಅಧ್ಯಕ್ಷರಾಗಿ ರಾಘವ ಆರ್ ಉಚ್ಚಿಲ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅಜಿತ್ ಶೆಟ್ಟಿ ಸೋಮೇಶ್ವರ, ಹರಿಪ್ರಸಾದ್ ಅಡ್ಕ, ನಾಗೇಶ್ ಪಂಡಿತ್ ಹೌಸ್ ಹಾಗೂ ಗೌರವ ಸಲಹೆಗಾರರಾಗಿ ರಾಮಚಂದ್ರ ಉಚ್ಚಿಲ್ ವಾಸುಗೋಪಾಲ್ ಕೆ. ಸಿ ನಾರಾಯಣ್, ಪದ್ಮನಾಭ ವರ್ಕಾಡಿ ಸುಧಾಕರ್ ಭಂಡಾರಿ ಶರತ್ ಚಂದ್ರ ಗಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸೋಮೇಶ್ವರ್, ಜೊತೆ ಕಾರ್ಯದರ್ಶಿ ಜಯಂತ್ ಮನೋಜ್, ದೀಪಕ್ ದಾಸ್, ಖಜಾಂಜಿಯಾಗಿ ಜಯರಾಂ ಸೋಮೇಶ್ವರ ಆಯ್ಕೆಗೊಂಡಿದ್ದು, ಮುದ್ದು ಕೃಷ್ಣ ವೇಷ ಸ್ಪರ್ಧೆಯ ಸಂಚಾಲಕರಾಗಿ ಪ್ರೇಮಲತಾ ಸೋಮೇಶ್ವರ, ಲಕ್ಷ್ಮೀತಾ ಸೋಮೇಶ್ವರ, ದಾಕ್ಷಾಯಿಣಿ ಸೋಮೇಶ್ವರ ಆಯ್ಕೆಯಾಗಿದ್ದಾರೆ.

Exit mobile version