Site icon Ullalavani

ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ

ಪುತ್ತೂರು : ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಇದರ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ “ಆರೋಗ್ಯಕರ ಜಮಾಅತ್” ಶೀರ್ಷಿಕೆಯಡಿ ಸಸಿ ವಿತರಣಾ ಕಾರ್ಯಕ್ರಮವು ಸಂಟ್ಯಾರ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.


ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಹನೀಫಿಯವರು ದುಆ ನೆರವೇರಿಸಿ ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಮಹಮ್ಮದ್ ಮಲಾರ್ ರವರಿಗೆ ಸಸಿ ವಿತರಿಸಿ, ಮಾತನಾಡಿದ ಅವರು ಸಸಿ ನೆಡುವುದು ಆ ಮೂಲಕ ಪರಿಸರ ಸಂರಕ್ಷಣೆಯು ನಮ್ಮ ಜವಾಬ್ದಾರಿಯಾಗಿದ್ದು, ಮಹಾ ಪ್ರತಿಫಲ ಲಭಿಸುವ ಪುಣ್ಯ ಕಾರ್ಯವಾಗಿದೆ, ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಗೆ ಧನ್ಯವಾದ ತಿಳಿಸಿದರು.


ಈ ಸಂದರ್ಭದಲ್ಲಿ ಜಮಾಅತ್ ಕಮಿಟಿ ಕಾರ್ಯದರ್ಶಿಗಳಾದ ಹಮೀದ್ ಕಲ್ಲರ್ಪೆ, ಜಮಾಅತ್ ಕಮಿಟಿ ಸದಸ್ಯರಾದ ರಝಾಕ್ ಸಂಟ್ಯಾರ್, ಫಾರೂಕ್ ಸಂಟ್ಯಾರ್, ಹಾರಿಸ್ ಸಂಟ್ಯಾರ್, ಅಬ್ಬಾಸ್ ಆರ್ಯಾಪು, ಅಬ್ದುಲ್ಲಾ ಮರಿಕೆ, ಶಂಸುದ್ದೀನ್ ಕಲ್ಲರ್ಪೆ, ಮಸೀದಿ ಸದರ್ ಮುಅಲ್ಲಿಮ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ , ಅನ್ಸಾರಿಯಾ ಯಂಗ್ಮೆನ್ಸ್ ಸಂಟ್ಯಾರ್ ಅಧ್ಯಕ್ಷರಾದ ಪವಾಝ್ ಮರಿಕೆ ಹಾಗೂ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಕೋಶಾಧಿಕಾರಿ ಮಹಮ್ಮದ್ ಅಲಿ ಮರಿಕೆ, ಸಮೀರ್ ಸಂಟ್ಯಾರ್, ಮುಸ್ತಫಾ ಮರಿಕೆ, ಹನೀಫ್ ಕಲ್ಲರ್ಪೆ ಉಪಸ್ಥಿತರಿದ್ದರು.

Exit mobile version