Site icon Ullalavani

ಸಂತ ಅಲೋಶಿಯಸ್ ಉರ್ವಾದಲ್ಲಿ ಶಾಲಾ ಪಾಲಕರ ದಿನಾಚರಣೆ

ಉರ್ವಾ; ದೀನದಲಿತರ ನೋವಿಗೆ ಧನಿಯಾಗಿ, ಸಮಾಜಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ದೈವತ್ವಕ್ಕೇರಿದ ಸಂತ ಅಲೋಶಿಯಸ್ ಗೊನ್ನಾಗ ಇವರ ಹುಟ್ಟುಹಬ್ಬವನ್ನು ಶಾಲಾ ಪಾಲಕರ ದಿನಾಚರಣೆಯಾಗಿ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗೊಂಝಾಗ ಜೀವನ,ಆದರ್ಶಗಳು ಎಂದಿಗೂ ನಮಗೆ ಅನುಕರಣೆಯ ಎಂಬುದಾಗಿ ಮುಖ್ಯ ಶಿಕ್ಷಕರಾದ ಶ್ರೀಯುತ ಅಲೋಶಿಯಸ್ ಡಿಸೋಜರವರು ವಿದ್ಯಾರ್ಥಿಗಳಿಗೆ ತಿಳಿಸಿದರು .

10ನೇ ತರಗತಿಯ ವಿದ್ಯಾರ್ಥಿಗಳು ಅಸೆಂಬ್ಲಿಯನ್ನು ನೆರವೇರಿಸಿದರು. ತರಗತಿ ಶಿಕ್ಷಕರು ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

Exit mobile version