ಶಿಕ್ಷಣವು ಕೇವಲ ಶಾಲೆಯಲ್ಲಿ ಮಾತ್ರ ಕಲಿಯುವುದಲ್ಲ ಮಗು ಹುಟ್ಟಿನಲ್ಲಿಂದ ಸಾಯುವವರೆಗೆ ಮಗು ಕಲಿಯುತಿರಬೇಕು. ಮತ್ತು ಕಲಿಯುತ್ತಾ ಇರುತ್ತದೆ. ಮಗುವಿಗೆ ಎಳೆಯದರಲ್ಲೇ ಸ್ನೇಹ ಮೈ ಜೀವನ, ಶಿಸ್ತುಮಯ ಜೀವನ, ಪ್ರಾಮಾಣಿಕ ಜೀವನ, ಸದಾ ಸತ್ಯವನ್ನೇ ನುಡಿಯುವುದು ಮೊದಲಾದ ಮಾನವೀಯ ಮೌಲ್ಯಗಳು ಬೆಳೆಯಬೇಕು.
ಇದು ಶಾಲೆ ಮತ್ತು ಮನೆಯಲ್ಲಿ ಮಗುವಿಗೆ ಅಭ್ಯಾಸವಾಗಿದೆ. ಮಗುವಿನ ಮೊದಲನೆಯ ಗುರು ತಾಯಿ ಮನೆಯಲ್ಲಿ ಅಭ್ಯಾಸಗಳನ್ನ ಮಾಡಿಸಬೇಕು ಎಂದು ಉಳ್ಳಾಲ ಠಾಣಾ ಅಧಿಕಾರಿ ಮೊಮ್ಮದ್ ಮನ್ಸೂರ್ ರವರು ಹೇಳಿದರು. ಅವರ ಇತ್ತೀಚೆಗೆ ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿ ರಕ್ಷಕರ ಸಭೆಯಲ್ಲಿ ಮಾತನಾಡುತ್ತಾ ತಾಯಿಯ ಪ್ರೀತಿಯು ಮಗುವಿಗೆ ಶ್ರೇಷ್ಠವಾದದ್ದು. ಆ ಪ್ರೀತಿಯಿಂದಲೇ ಮಗುವನ್ನ ತಿದ್ದಿ ಸುಂದರ ರೂಪ ಕೊಡಲು ಸಾಧ್ಯವಿದೆ. ಎಂದರು. ವಿದ್ಯಾರ್ಥಿ ರಕ್ಷಕರ ಸಭೆಯಲ್ಲಿ ಮುಖ್ಯ ಉಪಾಧ್ಯಾಯರಾದ ಶ್ರೀಯುತ ಕೆ ಎಂ ಕೆ ಮಂಜನಾಡಿ ಅವರು ಶಾಲೆಯಲ್ಲಿ ದೊರೆಯುವ ಸೌಲತ್ತುಗಳು, ಸರಕಾರದಿಂದ ಸಿಗುವ ಸೌಲತ್ತುಗಳು, ಸಾಲ ಆಡಳಿತ ಮಂಡಳಿಯೂ ನೀಡುವ ಉಚಿತ ಸೌಲಭ್ಯಗಳು ಇಂದು ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಪೂರಕವಾಗಿದೆ. ವಿದ್ಯಾರ್ಥಿಗಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸಿದಾಗ ವಿದ್ಯಾರ್ಥಿಗಳು ಮೌಲ್ಯಾದ್ಯರಿತ ಶಿಕ್ಷಣದೊಂದಿಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವರು ಎಂದು ಹೇಳಿದರು.
ಮಸ್ಜಿದಲ್ ಕರೀಂ ಅಧ್ಯಕ್ಷರಾದ ಹಾಜಿ ಮುಹಮ್ಮದ್ ತ್ವಹಾ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಲ್ತಾಫ್, ವಿದ್ಯಾರ್ಥಿ ರಕ್ಷಕರಾದ ಜಮಾಲುದ್ದೀನ್ ಮುಸ್ಲಿಯರ್ ಮೊದಲಾದವರು ಉಪಸ್ಥಿತರಿದ್ದರು