Site icon Ullalavani

ಕ್ಯಾಮರೂನ್‌ ದೇಶದ ಮಹಿಳಾ ರೋಗಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ

ಉಳ್ಳಾಲ: ಆಯೋರ್ಟಿಕ್ ವಾಲ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಕ್ಯಾಮರೂನ್ ದೇಶದ 38 ವರ್ಷದ ಮಹಿಳಾ ರೋಗಿಯೊಬ್ಬರು ಚಿಕಿತ್ಸೆ ಪಡೆಯಲು ಭಾರತಕ್ಕೆ ಬಂದಿದ್ದು, ಆಕೆಗೆ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ವರ್ಗಾಯಿತ ರಕ್ತ ನೀಡದೆ ಆಯೋರ್ಟಿಕ್ ವಾಳ್ವೆ ಬದಲಾವಣೆ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ.

ಮಹಿಳೆಯು ಯೆಹೋವನ ಸಾಕ್ಷಿಗಳು  ಧರ್ಮಕ್ಕೆ ಸೇರಿದವರಾಗಿದ್ದು,ಅವರು ತಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಯಾವುದೇ ಸಂದರ್ಭದಲ್ಲೂ ರಕ್ತ ವರ್ಗಾವಣೆಯನ್ನು  ಸ್ವೀಕರಿಸುವುವಂತಿರಲಿಲ್ಲ. ಈ ಕಾರಣದಿಂದಾಗಿ ಅನೇಕ ಆಸ್ಪತ್ರೆಗಳು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿರಲಿಲ್ಲ. ಬಳಿಕ ಅವರು ಭಾರತದಲ್ಲಿನ ಯೆಹೋವನ ಸಾಕ್ಷಿಗಳು ಸಂಸ್ಥೆಯ ಸಂಯೋಜಕರನ್ನು ಸಂಪರ್ಕಿಸಿದ್ದು, ಅವರು ಈ ಮಹಿಳೆಯನ್ನು ರಕ್ತದಾನಿಗಳ ವರ್ಗಾಯಿತ ರಕ್ತವನ್ನು ಬಳಸದೆ ಅನೇಕ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿರುವ ಹೃದಯ ಶಸ್ತ್ರಚಿಕಿತ್ಸಕರಾದ ಡಾ.ಎ.ಜಿ.ಜಯಕೃಷ್ಣನ್ ಅವರ ಬಳಿಗೆ ಕಳುಹಿಸಿದ್ದಾರೆ.

ಕೆ.ಎಸ್‌.ಹೆಗ್ಡೆ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ.ಎ.ಜಿ.ಜಯಕೃಷ್ಣನ್ ಅವರ ನೇತೃತ್ವದಲ್ಲಿ ಅರಿವಳಿಕೆ ವಿಭಾಗದ ತಜ್ಞರಾದ ಡಾ.ಮಂಜುನಾಥ ಕಾಮತ್ ಹಾಗೂ ಡಾ.ಚೇತನ್ ಕುಮಾರ್ ಅವರೊಂದಿಗೆ ಹೃದ್ರೋಗ ವಿಭಾಗದ ಹೃದಯ ಶಸ್ತ್ರಚಿಕಿತ್ಸಕರಾದ ಡಾ.ನರೇಶ್‌ಚಂದ ಹೆಗ್ಡೆ ಹಾಗೂ ಡಾ.ಅನುಪ್ ಶ್ರೀನಿವಾಸನ್ ಹಾಗೂ ಪರ್ಪ್ಯೂಷನಿಸ್ಟ್‌ಗಳು ಮತ್ತು ನರ್ಸಿಂಗ್ ಸಿಬ್ಬಂದಿಯ ತಂಡವು ಯಶಸ್ವಿಯಾಗಿ ಶಸ್ತ್ರಕ್ರಿಯೆಯನ್ನು ನೆರವೇರಿಸಿದೆ. ಕೆ.ಎಸ್‌.ಹೆಗ್ಡೆ ಮೆಡಿಕಲ್ ಅಕಾಡೆಮಿ(ಕ್ಷೇಮ)ಯ ಡೀನ್ ಡಾ.ಸಂದೀಪ್ ರೈ ಹಾಗೂ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸುಮಲತಾ ಶೆಟ್ಟಿಯವರು ಶಸ್ತ್ರಕ್ರಿಯೆ ನಡೆಸಿದ ಡಾ.ಎ.ಜಿ.ಜಯಕೃಷ್ಣನ್ ನೇತೃತ್ವದ ತಂಡವನ್ನು ಅಭಿನಂದಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದುಅವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.ಅವರು ಮುಂದಿನ ಕೆಲ ದಿನಗಳಲ್ಲಿ ತಮ್ಮ ತಾಯ್ಕಾಡು ಕ್ಯಾಮರೂನ್‌ಗೆ ಮರಳುವ ನಿರೀಕ್ಷೆಯಿದೆ ಎಂದು ಪ್ರಕಟನೆ ತಿಳಿಸಿದೆ.

Exit mobile version