
ಕುಂಪಲ : ಇಲ್ಲಿನ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ಜೂ.16ರಿಂದ ಜೂ.17ರ ವರೆಗೆ ಶ್ರೀ ದುರ್ಗಾದೇವಿ, ಶ್ರೀ ಅನಂತ ಪದ್ಮನಾಭ ಮತ್ತು ನವಗ್ರಹ ದೇವರ ಬಿಂಬ ಪ್ರತಿಷ್ಠೆ ಅಷ್ಠಬಂಧ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ.
ಜೂ.16ರಂದು ಸಂಜೆ 7ಗಂಟೆಗೆ ವಾಸ್ತು ಹೋಮ,ಶಯನ ಪೂಜೆ,ಜೂ.17ರಂದು ಬೆಳಿಗ್ಗೆ 6.00ಗಂಟೆಯಿಂದ 208 ತೆಂಗಿನಕಾಯಿ ಗಣಪತಿ ಹೋಮ,ವಿಷ್ಣು ಸಹಸ್ರನಾಮ ಹೋಮ,ಪ್ರಾತಿಷ್ಠಾ ಹೋಮ ಬೆಳಿಗ್ಗೆ 7.52ರ ಮಿಥುನ ಲಘ್ನ ದಲ್ಲಿ ಅನಂತಪದ್ಮನಾಭ ದೇವರ ಬಿಂಬ ಪ್ರತಿಷ್ಠೆ ಸಂಜೆ 7.00ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಜೂ.18ರಂದು ಬೆಳಿಗ್ಗೆ 10.00ಗಂಟೆಗೆ ಶ್ರೀ ದುರ್ಗಾಪರಮೇಶ್ವರ ದೇವರಿಗೆ ಶತರದ್ರಾಭಿಷೇಕ ವಿಶೇಷ ಪೂಜೆ. ಸಂಜೆ7.00ಗಂಟೆಗೆ ಶ್ರೀ ದುರ್ಗಾ ನಮಸ್ಕಾರ ಪೂಜೆ,ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ.ಜೂ.19ರಂದು ಬೆಳಿಗ್ಗೆ 6.00ರಿಂದ ಗಣಹೋಮ,ಕಲಶಹೋಮ ಬೆಳಿಗ್ಗೆ ಗಂಟೆ 8.02ರ ಮಿಥುನ ಲಘ್ನದ ಶುಭ ಮುಹೂರ್ತದಲ್ಲಿ ಶ್ರೀ ದುರ್ಗಾದೇವಿಯ ಅಷ್ಠಬಂಧ ಬಿಂಬ ಪ್ರತಿಷ್ಠೆ ಬೆಳಿಗ್ಗೆ ಗಂಟೆ 10.12ಕ್ಕೆ ಕರ್ಕಾಟಕ ಲಘ್ನದಲ್ಲಿ ನವಗ್ರಹ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಮಹಾ ಚಂಡಿಕಾ ಯಾಗ ಮಹಾಪೂಜೆ ಮಂತ್ರಾಕ್ಷತೆ ನಡೆಯಲಿದೆ.