Site icon Ullalavani

ಹರೇಕಳ ಗ್ರಾಮ ಪಂಚಾಯತ್ ನಿವೇಶನ ರಹಿತರಿಗೆ ಮೀಸಲಿಟ್ಟ ಜಾಗದ ಅವಸ್ಥೆ ನೋಡಿ..

ಮಂಗಳೂರು ವಿಧಾನ ಸಭಾ ಕ್ಷೇತ್ರದ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಸಿಪಿಐಮ್ ಹರೇಕಳ ಗ್ರಾಮ ಪಂಚಾಯತ್ ಮುಂಭಾಗ ಧರಣಿ ನಡೆಸಿ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶೀಘ್ರವೇ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿತು.. ಪ್ರತಿಭಟನೆಯಿಂದ ಎಚ್ಚೆತ್ತ ಅಧಿಕಾರಿಗಳು ನಿವೇಶನರಹಿತರಿಗೆ ನಿವೇಶನ ನೀಡುವ ಭರವಸೆ ನೀಡಿದರು.

ನಂತರ ಮಲಾರ್ ಕೋಡಿ ಎಂಬಲ್ಲಿ ಗುಡ್ಡ ಇಳಿಜಾರು ಪ್ರದೇಶದಲ್ಲಿ ಜಾಗವನ್ನು ಗುರುತಿಸಲಾಯಿತು.. ತರಾತುರಿಯಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೀಸಲಿಟ್ಟ ಜಾಗವನ್ನು ಅವೈಜ್ಞಾನಿಕವಾಗಿ ಸಮತಟ್ಟುಗೊಳಿಸಿದರು. ಸದ್ಯ ಒಂದೇ ಮಳೆಗೆ ಸಮತಟ್ಟು ಗೊಳಿಸಿದ ಜಾಗವು ಕೊಚ್ಚಿ ಹೋಗಿದ್ದು ಲಕ್ಷಾಂತರ ರೂಪಾಯಿ ನೀರಿನಲ್ಲಿ ಬಿಟ್ಟಂತಾಗಿದೆ.

ನೆಲೆಸಲು ಯೋಗ್ಯವೇ ಇಲ್ಲದ, ಸಂಬಂಧಪಟ್ಟ ಇಲಾಖೆಗಳಿಂದ NOC ಯನ್ನೂ ಪಡೆಯದೇ ಅವೈಜ್ಞಾನಿಕವಾಗಿ ಸಮತಟ್ಟುಗೊಳಿಸಿ ಲಕ್ಷಾಂತರ ರೂಪಾಯಿಯನ್ನು ಪೋಲು ಮಾಡಲಾಗಿದೆ… ಸದ್ಯ ಮೀಸಲಿಟ್ಟ ಜಾಗವು ಇನ್ನೂ ಸರಿಯಾಗಿ ಪ್ರಾರಂಭವಾಗದ ಮಳೆಗೆ ಕೊಚ್ಚಿ ಹೋಗಿ ಹೊಂಡ ನಿರ್ಮಾಣವಾಗಿದ್ದು ಬಿರುಸಾಗಿ ಮಳೆ ಬಂದರೆ ವಯನಾಡ್ ಲ್ಯಾಂಡ್ ಸ್ಲಯ್ಡ್ ಅದ ರೀತಿಯಲ್ಲಿ ಆಗುವ ಸಾಧ್ಯತೆ ಹೆಚ್ಚಾಗಿದೆ..

Exit mobile version