Site icon Ullalavani

29ನೇ ವರ್ಷದ ಕುಂಪಲಾಷ್ಟಮಿ ಉತ್ಸವಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕುಂಪಲ, ಜೂನ್ 12: ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಸಂಚಾಲಿತ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯ ಮಹಾಸಭೆಯು ಮಂದಿರದ ಅಧ್ಯಕ್ಷರಾದ ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 29ನೇ ವರ್ಷದ ಕುಂಪಲಾಷ್ಟಮಿ ಉತ್ಸವದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉತ್ಸವದ ಅಧ್ಯಕ್ಷರಾಗಿ ಸೂರಜ್ ಸಾಗರ್ ಕುಂಪಲ, ಪ್ರಧಾನ ಸಂಚಾಲಕರಾಗಿ ಜಯ ಪೂಜಾರಿ ಲಕ್ಷ್ಮಿಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಸತ್ಯಪ್ರಸಾದ್ ಬಗಂಬಿಲ ಹಾಗೂ ಶೋಭಾಯಾತ್ರೆ ಸಂಚಾಲಕರಾಗಿ ಮನೋಹರ್ ಗಟ್ಟಿ ಕುಂಪಲ ಅವರು ಆಯ್ಕೆಯಾದರು.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಮಿತಿಯ ಸದಸ್ಯರು ಹಾಗೂ ಭಕ್ತರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, 29ನೇ ವರ್ಷದ ಕುಂಪಲಾಷ್ಟಮಿ ಉತ್ಸವವು ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಲೆಂದು ಶುಭ ಹಾರೈಸಿದರು.

Exit mobile version