ಹನುಮಾನ್ ನಗರ ಕುಂಪಲದ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ವತಿಯಿಂದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವ್ಯಾಯಾಮ ಶಾಲೆಯ ಸದಸ್ಯರ ಮಕ್ಕಳಿಗೆ ಗೌರವ ಅಭಿನಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ವ್ಯಾಯಾಮ ಶಾಲೆಯ ಸದಸ್ಯರಾದ ದಿವಂಗತ ರೋಹಿತಾಕ್ಷ ಅವರ ಪುತ್ರಿ ಸಹನ, ಮೋಹನ್ ನಾಯಕ್ ಅವರ ಪುತ್ರಿ ದೀಪ್ತಿ ಎಂ. ಹಾಗೂ ಯಶ್ವಂತ್ ಹನುಮಾನ್ ನಗರ ಅವರ ಪುತ್ರಿ ತನ್ವಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ಉಮೇಶ್ ಕುಜುಮಗದ್ದೆ ಕಾರ್ಯಕ್ರಮದ ನೇತೃತ್ವ ವಹಿಸಿ, ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವ್ಯಾಯಾಮ ಶಾಲೆಯ ಅಧ್ಯಕ್ಷ ಅಶ್ವಥ್, ಕಾರ್ಯದರ್ಶಿ ಭವಿತ್ ಕುಲಾಲ್ ಹಾಗೂ ಶಾಲೆಯ ಸದಸ್ಯರು ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.