Site icon Ullalavani

ಮುನ್ನೂರು: ಸಂಘಟನೆ ಮತ್ತು ಮಾಹಿತಿ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುನ್ನೂರು: ಕಟ್ಟಡ ಮತ್ತು ಇತರೆ ನಿರ್ದಿಷ್ಟ ಕಾರ್ಮಿಕರ ಸಂಘ ಸಿಐಟಿಯು ಇದರ ಸಂಘಟನೆ ಮತ್ತು ಮಾಹಿತಿ ಕಾರ್ಯಕ್ರಮವು ಮುನ್ನೂರು ಯುವಕ ಮಂಡಲದ ಎಮ್.ವೈ.ಎಮ್. ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಜನಾರ್ಧನ್ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಕೋಶಾಧಿಕಾರಿಯಾಗಿ ಯೋಗೀಶ್ ಜಪ್ಪಿನಮೊಗರು ಇವರು ಕಾರ್ಮಿಕರಿಗೆ ಮಂಡಳಿಯಲ್ಲಿ ಸಿಗುವ ಸವಲತ್ತುಗಳನ್ನು ಪಡೆಯುವ ಬಗ್ಗೆ ಮಂಡಳಿಗೆ ನೊಂದಾವಣಿಗೊಳಿಸುವ ಬಗ್ಗೆ ಕಟ್ಟಡ ಕಾರ್ಮಿಕರಿಗೆ ಮಾಹಿತಿಯನ್ನು ನೀಡಿದ್ದರು. ಜಿಲ್ಲಾ ಸಿ.ಐ.ಟಿ.ಯು ಜೊತೆ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಂಘಟನೆಯ ಬಗ್ಗೆ ತರಬೇತಿ ಮಾಡಿದ್ದರು.

ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ ಕಾರ್ಮಿಕರಿಗೆ ಸಿಗುವ ಸವಲತ್ತುಗಳ ವಿಳಂಭ ಧೋರಣೆಯ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡಿ ಮಂಡಳಿಯಲ್ಲಿ 12 ಬಗೆಯ ಸವಲತ್ತುಗಳು ಇವೆ. ಆದರೆ ಅರ್ಜಿ ಹಾಕಿ ವರ್ಷ ಕಳೆದರೂ ಸವಲತ್ತು ಕಾರ್ಮಿಕರ ಕೈಗೆ ಸಿಗುತ್ತಿಲ್ಲ. ಸಿಐಟಿಯು ಹೋರಾಟದ ಫಲವಾಗಿ ಕಟ್ಟಡ ಕಾರ್ಮಿಕರ ಮಂಡಳಿ ರಚನೆಯಾಗಿದೆ. ಕಾನೂನು ಸವಲತ್ತುಗಳನ್ನು ಜಾರಿಗೊಳಿಸಲು ಸಾಧ್ಯವಾಗಿದೆ. ಆದರೆ ಈಗ ಕಾರ್ಮಿಕ ಅ„ಕಾರಿಗಳು ಸವಲತ್ತು ನೀಡಲು ವಿಳಂಬ ಧೋರಣೆ ಹಾಗೂ ಅರ್ಜಿ ಫಾರ್ಮುಗಳನ್ನು ಕಠಿಣಗೊಳಿಸಿ ಕಾರ್ಮಿಕರಿಗೆ ಸವಲತ್ತು ಸಿಗದೆ ಹಾಗೆ ಮಾಡುವ ಕೆಲಸಗಳನ್ನು ಮಾಡುತ್ತಾರೆ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ಚಂದ್ರಹಾಸ್ ಪಿಲಾರ್, ರೋಹಿದಾಸ್ ಭಟ್ನಗರ, ರಾಮಚಂದ್ರ ಪಾನೀರು, ಇಬ್ರಾಹಿಂ ಮದಕ, ದುಗ್ಗಪ್ಪ ಬಾಳೆಪುಣಿ, ನಾರಾಯಣ ಉಳ್ಳಾಲ ಬೈಲು, ಕೃಷ್ಣಪ್ಪ ಸಾಲಿಯಾನ್ ಉಪಸ್ಥಿತರಿದ್ದರು. ರೋಹಿದಾಸ್ ಭಟ್ನಗರ ಸ್ವಾಗತಿಸಿದರು. ಚಂದ್ರಹಾಸ್ ಪಿಲಾರ್ ವಂದಿಸಿದರು.

Exit mobile version