Site icon Ullalavani

ಕೋಟೆಕಾರ್: ಕೊಲಂಗರೆ ಸರಕಾರಿ ಕೆರೆಯ ಒಂದು ಭಾಗ ಕುಸಿತ..!! ಭೀತಿಯಲ್ಲಿ ಸ್ಥಳೀಯರು

“ಉಳ್ಳಾಲ:ಕೋಟೆಕಾರ್ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊಳಂಗರ ಸರಕಾರಿ ಕೆರೆಯ ಒಂದು ಭಾಗ ಪಾರ್ಶ್ವ ಕುಸಿದಿದೆ. ಇದರಿಂದ ಈ ಕೆರೆಯ ಸುತ್ತಮುತ್ತಲಿರುವ ಮನೆಗಳು ಅಪಾಯಕ್ಕೆ ಸಿಲುಕಿವೆ. ಇಲ್ಲಿನ ಅಬ್ಬುಲ್ ಖಾದರ್ ಎಂಬವರ ಮನೆ ಹೆಚ್ಚು ಅಪಾಯದಲ್ಲಿದೆ.

ಈ ಬಗ್ಗೆ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಅಹ್ಮದ್ ಅಜ್ಜಿನಡ್ಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕೊಳಂಗರದಲ್ಲಿರುವ ಈ ಕೆರೆಯನ್ನು ಹತ್ತು ವರ್ಷಗಳ ಹಿಂದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಕೆರೆಯ ಒಂದು ಬದಿ ಬಿರುಕುಬಿಟ್ಟಿದೆ ಎಂದು ಅಹ್ಮದ್ ಅಜ್ಜಿನಡ್ಕ ಮನವಿಯಲ್ಲಿ ತಿಳಿಸಿದ್ದಾರೆ,

Exit mobile version