Site icon Ullalavani

ದೇರಳಕಟ್ಟೆ: ಅವೈಜ್ಞಾನಿಕ ಬಸ್ ನಿಲುಗಡೆ, ಪ್ರತಿಭಟನೆಗೆ ಸಜ್ಜಾದ ತುರವೇ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ :  ದೇರಳಕಟ್ಟೆ ಜಂಕ್ಷನ್ ಹಾಗೂ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮುಂಭಾಗದಲ್ಲಿ ಜನದಟ್ಟಣೆ ಇದ್ದು ಈ ರಸ್ತೆಯ ಮೂಲಕ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಆ ಹಿನ್ನೆಲೆಯಲ್ಲಿ ಸರಕಾರ ಬಸ್ ನಿಲುಗಡೆಗೆ ದೇರಳಕಟ್ಟೆ ಜಂಕ್ಷನ್ ಹಾಗೂ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮುಂಭಾಗದಲ್ಲಿ ಸುಸಜ್ಜಿತವಾದ ವ್ಯವಸ್ಥೆ ಮಾಡಿದ್ದರೂ ಬಸ್ ಚಾಲಕರು ನಿರಂತರವಾಗಿ ಅವೈಜ್ಞಾನಿಕವಾಗಿ ಬಸ್ ನಿಲುಗಡೆಗೊಳಿಸುವುದರಿಂದ ಅಪಘಾತಗಳು ಹೆಚ್ಚುತ್ತಿದ್ದು ಅಂತಹ ಕ್ರಮವನ್ನು ತುಳುನಾಡ ರಕ್ಷಣಾ ವೇದಿಕೆ ಖಂಡಿಸಿದ್ದು, ಸರಕಾರ ವ್ಯಸವ್ಥೆಗೊಳಿಸಿದ ಬಸ್ ನಿಲುಗಡೆಯ ಸ್ಥಳದಲ್ಲಿಯೇ ನಿಲುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದು, ಆ ಬಗ್ಗೆ ಪೆÇಲೀಸ್ ಇಲಾಖೆ ಶೀಘ್ರದಲ್ಲಿ ಸೂಕ್ತ ಕ್ರಮಕೈಗೊಳ್ಳದಿದ್ದರೆ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಡಾ. ಹಾಜಿ ಕೆ. ಎ. ಮುನೀರ್ ಬಾವಾ ತಿಳಿಸಿದ್ದಾರೆ.

Exit mobile version