Site icon Ullalavani

ರಾಜ್ಯದ 6 ನೇ ರ್‍ಯಾಂಕ್ ಪಡೆದ ಸಿಂಚನಾಳಿಗೆ ಸನ್ಮಾನ

ಮಕ್ಕಳ ಸಾಧನೆಯಲ್ಲಿ ತಂದೆ ತಾಯಿಯರ ಪಾತ್ರ ಹಿರಿದು,ಯಾವುದೇ ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಸಿಂಚನ ಸಾಕ್ಷಿ ಯಾಗಿದ್ದಾಳೆ. ಯಾವುದೇ ಟ್ಯೂಷನ್ ಗಳಿಗೆ ಹೋಗದೆ ಸರಕಾರಿ ಶಾಲೆಯಲ್ಲಿ ಶಿಕ್ಷಕರು ಕಲಿಸಿರುವ ವಿಷಯಗಳನ್ನು ಸರಿಯಾಗಿ ಕಲಿತು ಇಂದು ರ್‍ಯಾಂಕ್ ಗಳಿಸಿರುವುದು ಹೆಮ್ಮೆಯ ವಿಚಾರ. ಇಂತಹ ಸಾಧಕರನ್ನು ಅವರ ಮನೆಯಲ್ಲಿ ಹೆತ್ತವರ ಸಮ್ಮುಖದಲ್ಲಿ ಸನ್ಮಾನ ಮಾಡಿದಾಗ ಹೆತ್ತವರ ಶ್ರಮ ಮಕ್ಕಳಿಗೆ ಅರ್ಥವಾಗುವಲ್ಲಿ ಸಂಶಯ ಇಲ್ಲ ಎಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಅಭಿಪ್ರಾಯಪಟ್ಟರು.

ಇವರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಇತ್ತೀಚಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ್‍ಯಾಂಕ್ ಗಳಿಸಿದ ಸಿಂಚನಳಿಗೆ ಅವರ ದೇರಳಕಟ್ಟೆ ಮನೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಈ ಶಾಲೆಯ ವಿದ್ಯಾರ್ಥಿನಿ ಯಾಗಿರುವ ಇವಳು ಉಳ್ಳಾಲ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿರುತ್ತಾಳೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ಪ್ರತೀಪ ಎ.ಆರ್, ರಾಜ್ಯ ಕಾರ್ಯದರ್ಶಿಯಾದ ತ್ಯಾಗಂ ಹರೆಕಳ, ಜಿಲ್ಲಾ ಕೋಶಾಧಿಕಾರಿಯಾದ ಪ್ರತಿಮಾ ಹೆಬ್ಬಾರ್, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಡಾ. ಮಂಜುಳಾ ಶೆಟ್ಟಿ,ಸಾಂಸ್ಕೃತಿಕ ಕಾರ್ಯದರ್ಶಿಯಾದ ಜಯಲಕ್ಷ್ಮಿ ಕುಂಪಲ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಉಮೇಶ್ ಕೆ ಆರ್ ಇವರುಗಳು ಉಪಸ್ಥಿತರಿದ್ದರು.

ಜಿಲ್ಲಾ ಕೋಶಾಧಿಕಾರಿ ಪ್ರತಿಮಾ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಜಯಲಕ್ಷ್ಮಿ ಜಿ ಕುಂಪಲ ಧನ್ಯವಾದ ವಿತ್ತರು.ಜಿಲ್ಲಾ ಕಾರ್ಯದರ್ಶಿ ಪ್ರತೀಪ ಎ ಆರ್ ನಿರೂಪಿಸಿದರು.

Exit mobile version