Site icon Ullalavani

ಸೋಮೇಶ್ವರದಲ್ಲಿ ಜೋಡಿಪತ್ತೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಸೋಮೇಶ್ವರ: ಕಾರಿನಲ್ಲಿ ರೊಮ್ಯಾನ್ಸ್ ನಡೆಸುತ್ತಿದ್ದ ಜೋಡಿಯನ್ನು ಉಳ್ಳಾಲ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ ಪ್ರಸಂಗ ಸೋಮೇಶ್ವರ ಸಮುದ್ರ ತೀರದ ನಿರ್ಜನ ಪ್ರದೇಶದಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಸಾಂಧರ್ಬಿಕ ಚಿತ್ರ

ಬೆಳಿಗ್ಗೆ 10ಗಂಟೆಗೆ ಸುಮಾರಿಗೆ ಬಂದಿದ್ದ ಕಾರು ಬಹಳ ಹೊತ್ತಾದರೂ ಕದಲದೇ ಇರುವುದನ್ನು ಗಮನಿಸಿದ ಸ್ಥಳಿಯರೋರ್ವರಿಗೆ ಕಾರಿನಲ್ಲಿ ಜೋಡಿಯೊಂದು ಪ್ರಣಯದಾಟದಲ್ಲಿ ಇರುವುದು ಕಂಡುಬಂದಿದೆ. ಮುಂಜಾಗ್ರತಾ ಕ್ರಮವಾಗಿ ಮುಂದೆ ಸ್ಥಳದಲ್ಲಿ ಯಾವುದೇ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಸ್ಥಳೀಯರೊಬ್ಬರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೋಡಿಯನ್ನು ವಿಚಾರಣೆಗೆ ತೆಗೆದುಕೊಂಡು ಇಬ್ಬರೂ ನೆರೆಹೊರೆಯವರಾಗಿದ್ದು, ಪ್ರೇಮಿಗಳೆಂದು ತಿಳಿಸಿದ್ದಾರೆ. ಬಳಿಕ ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆನ್ನಲಾಗಿದೆ.

ಸ್ಥಳೀಯರ ಪ್ರಕಾರ ಯುವಕ ಕ್ರಿಶ್ಚಿಯಾನ್ ಸಮುದಾಯಕ್ಕೆ ಸೇರಿದವನಾಗಿದ್ದು, ಯುವತಿ ಉತ್ತರಕರ್ನಾಟಕ ಮೂಲದವರೆಂದು ತಿಳಿದುಬಂದಿದೆ.

ಸೋಮೇಶ್ವರ ಕಡಲ ತೀರದಲ್ಲಿ ಇಂತಹ ಅನೈತಿಕ ವ್ಯವಹಾರಗಳು ಸರ್ವೇಸಾಮಾನ್ಯವಾಗಿದ್ದು, ಧಾರ್ಮಿಕ ಕ್ಷೇತ್ರ ಹತ್ತಿರದಲ್ಲೇ ಇರುವ ಕಾರಣ ಇಲ್ಲಿಗೆ ದಿನದಲ್ಲಿ ನೂರಾರು ಭಕ್ತಾಧಿಗಳು ಬರುತ್ತಿರುತ್ತಾರೆ ಆದ್ದರಿಂದ ಈ ರೀತಿಯ ಘಟನೆಗಳು ಈ ಪರಿಸರದಲ್ಲಿ ನಡೆಯಬಾರದು ಹಾಗೂ ನೈತಿಕ ಪೊಲೀಸ್‍ಗಿರಿಯಂತಹ ಘಟನೆಗಳು ಈ ವಲಯದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಘಟನೆ ನಡೆಯುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಅತಿ ಮುಖ್ಯ ಎಂಬುವುದು ಇಲ್ಲಿನ ಪ್ರಜಾÐವಂತ ನಾಗರೀಕರ ಅಭಿಪ್ರಾಯ.

Exit mobile version