ಉಳ್ಳಾಲ, ಜೂನ್ 5: ಮಾರುತಿ ಯುವಕ ಮಂಡಲ (ರಿ.) ಹಾಗೂ ಮಾರುತಿ ಜನಸೇವಾ ಸಂಘ, ಮೊಗವೀರ ಪಟ್ನ, ಉಳ್ಳಾಲ ಇದರ 2025-26ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ಅನಿಲ್ ಚರಣ್ ಉಳ್ಳಾಲ ಆಯ್ಕೆಯಾಗಿದ್ದಾರೆ. ಪ್ರಧಾನ ಸಂಚಾಲಕರಾಗಿ ಸುಧೀರ್ ವಿ. ಅಮೀನ್, ಗೌರವ ಅಧ್ಯಕ್ಷರಾಗಿ ಕಿರಣ್ ಕುಮಾರ್, ಉಪಾಧ್ಯಕ್ಷರಾಗಿ ಪ್ರಶಾಂತ್ ಬಿ. ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಕಪಿಲ್ ಎಸ್. ಬಂಗೇರ, ಕೋಶಾಧಿಕಾರಿಯಾಗಿ ತಿಲಕ್ ಎಸ್. ಬಂಗೇರ, ಕ್ರೀಡಾ ಕಾರ್ಯದರ್ಶಿಯಾಗಿ ಮಹೇಶ್ ಸಾಲ್ಯಾನ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪವನ್ ಬಂಗೇರ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ವರದರಾಜ ಬಂಗೇರ, ಸಂದೀಪ್ ಪುತ್ರನ್, ಅಶ್ವಿನ್ ಕೋಟ್ಯಾನ್, ದಿನೇಶ್ ಕರ್ಕೇರ, ವಾಸುದೇವ ಕರ್ಕೇರ, ಅಜಿತ್ ಸುವರ್ಣ ಹಾಗೂ ಪ್ರಕಾಶ್ ತಿಂಗಳಾಯ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಲೋಕನಾಥ್ ಕೋಟ್ಯಾನ್, ಚೆನ್ನಪ್ಪ ಅಮೀನ್, ರಘವೀರ್ ಗುರಿಕಾರ, ರೂಪೇಶ್, ರಂಜಿತ್, ಸುದೀರ್ ಸುವರ್ಣ, ವರುಣ್, ಕಮಲಾಕ್ಷ, ಮನೋಹರ್, ಗಣರಾಜ, ದಾಮೋದರ್ ಹಾಗೂ ರೋಮಿತ್ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.