Site icon Ullalavani

ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲು ಆಗ್ರಹ

ಜಾಗತಿಕ ಯುಧ್ಧ ಪರಿಣಾಮ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಕೃಷಿ ವಲಯಕ್ಕೆ ದೊಡ್ಡ ಹೊಡೆತ ಉಂಟಾಗಿದೆ.

ಈಗಾಗಲೆ ಗದ್ದೆ ಉಳುಮೆ,ಅಡಿಕೆ ತೋಟಗಳಿಗೆ ಮದ್ದು ಸಿಂಪಡಣೆ,ಅಡಿಕೆ ತೋಟಗಳಲ್ಲಿ ಹಾಗೂ ಇತರ ಕಡೆ ಕಳೆನಾಶ ಸಿಂಪಡಣೆ ಹಾಗೂ ಇತರ ಕೆಲಸಗಳು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಅವಲಂಬಿತವಾಗಿದ್ದು ತೈಲ ಬೆಲೆ ಏರಿಕೆಯಿಂದಾಗಿ ರೈತರಿಗೆ ಹಾಗೂ ಕೃಷಿವಲಯಕ್ಕೆ ನಷ್ಟ ಉಂಟಾಗಿದೆ.ಕೂಲಿಯಾಳುಗಳ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆಗೊಂಡಿದ್ದರೂ ರೈತರು ಯಾಂತ್ರಿಕ ಕೃಷಿ ಚಟುವಟಿಕೆಯತ್ತ ಗಮನ ಹರಿಸಿದ್ದರು.ಕೃಷಿ ಸರಕು ಸಾಗಣೆಯ ವಾಹನಗಳಿಗೆ ದುಬಾರಿ ಖರ್ಚು ತಗುಲಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ‌.ಆದ್ದರಿಂದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಕೃಷಿ ಯಂತ್ರೋಪಕರಣ ಹಾಗೂ ವಾಹನಗಳಿಗೆ ಡಿಸೇಲ್ ಸಬ್ಸಿಡಿ ನೀಡಬೇಕೆಂದು ದ.ಕ ಜಿಲ್ಲೆಯ ಸಂಸದರು ಹಾಗೂ ಶಾಸಕರಿಗೆ ಮನವಿ ಮಾಡುತ್ತ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಇವರಲ್ಲಿ ಮನವಿ ಮಾಡಲಾಗುವುದು ಎಂದು ಕ.ರಾ.ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಹಾಗೂ ಕ.ರಾ.ರೈತ ಸಂಘ ದ.ಕ ಜಿಲ್ಲಾಧ್ಯಕ್ಷರಾದ ಶ್ರೀಧರ ಶೆಟ್ಟಿ ಬೈಲುಗುತ್ತು ಇವರು ತಿಳಿಸಿದ್ದಾರೆ.

Exit mobile version