ಉಳ್ಳಾಲ: ದಾರುನ್ನಜಾತ್ ಎಜ್ಯುಕೇಶನ್ ಸೆಂಟರ್, ಸಿ.ಎಂ. ನಗರ, ಚಿನಾಲ ಚಿಗುರುಪಾದೆ ಇದರ ವತಿಯಿಂದ ಖಾಝಿ ಸಯ್ಯಿದ್ ಉಮರುಲ್ ಫಾರೂಖ್ ತಂಙಳ್ ಅಲ್ ಬುಖಾರಿ ಪೂಸೋಟು (ಖ.ಸಿ) ರವರ ಆಂಡ್ ನೇರ್ಚೆ ಹಾಗೂ ನಮ್ಮಿಂದ ಅಗಲಿದವರ ಹೆಸರಲ್ಲಿ ದುಆ ಮಜ್ಲಿಸ್ ಮತ್ತು ತಹ್ಲೀಲ್ ಸಮರ್ಪಣೆ ಕಾರ್ಯಕ್ರಮವು ಜೂನ್ 13ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ.
ಕಾರ್ಯಕ್ರಮಕ್ಕೆ ಸಲೀಂ ಮದನಿ ಕುತ್ತಾರ್ ನೇತೃತ್ವ ವಹಿಸಲಿದ್ದು, ಚೇರೂರು ಉಸ್ತಾದ್, ಅಬ್ದುಲ್ ಖಾದರ್ ಸಖಾಫಿ ಉಸ್ತಾದ್, ಜಿ.ಎಸ್. ಉಸ್ತಾದ್, ಪಲ್ಲಪಾಡಿ ಉಸ್ತಾದ್, ಅಬ್ದುಲ್ ಲತೀಫ್ ಮದನಿ ಸಜಿಪ ಹಾಗೂ ಶಬೀರ್ ಅಶ್ಅರಿ ಕೆ.ಸಿ.ರೋಡ್ ಸೇರಿದಂತೆ ವಿವಿಧ ಸಾದಾತುಗಳು, ಉಲಮಾ ಹಾಗೂ ಉಮರಾ ನೇತಾರರು ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ದಾರುನ್ನಜಾತ್ ಎಜ್ಯುಕೇಶನ್ ಸೆಂಟರ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.